ಬರೇಲಿ(ಉತ್ತರ ಪ್ರದೇಶ): ಪದೇ ಪದೇ ಅತ್ಯಾಚಾರ ಮತ್ತು ಬೆದರಿಕೆಗೆ ಒಳಗಾಗಿದ್ದ 11 ವರ್ಷದ ಬಾಲಕಿ ಅಕಾಲಿಕ ಮಗುವಿಗೆ ಜನ್ಮ ನೀಡಿದ್ದಾಳೆ, ಆದರೆ ಆ ಮಗು ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗರ್ಭಧಾರಣೆಯ ಏಳು ತಿಂಗಳ ನಂತರ ಶಿಶು ಜನಿಸಿ ಅರ್ಧ ಗಂಟೆಯ ನಂತರ ಸಾವನ್ನಪ್ಪಿದೆ ಎಂದು ಅವರು ತಿಳಿಸಿದ್ದಾರೆ.
ಎರಡು ಮಕ್ಕಳ ತಂದೆಯಾದ ರಶೀದ್ ಎಂಬ 31 ವರ್ಷದ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದು, ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಲೈಂಗಿಕ ಸಂಬಂಧ ಮುಂದುವರಿಸಲು ಬೆದರಿಕೆ ಹಾಕಿದ್ದಾನೆ. ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ.