WATCH : ತಾಯಿಯ ಅಂತ್ಯಸಂಸ್ಕಾರಕ್ಕೆ ಭಿಕ್ಷೆ ಬೇಡಿದ 11 ವರ್ಷದ ಬಾಲಕಿ: ‘ಕರುಳು ಚುರ್’ ಎನ್ನುವ ವಿಡಿಯೋ ವೈರಲ್……!

ತೆಲಂಗಾಣದ ನಿರ್ಮಲ್ ಜಿಲ್ಲೆಯ ತನೂರ್ ಮಂಡಲದಲ್ಲಿರುವ ಭೇಲ್ ತರೋಡಾ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.

11 ವರ್ಷದ ಬಾಲಕಿಯೊಬ್ಬಳು ತನ್ನ ಹೆತ್ತವರಿಬ್ಬರ ದುರಂತ ಸಾವಿನ ನಂತರ ಏಕಾಂಗಿಯಾಗಿದ್ದಾಳೆ. ಮೃತ ತಾಯಿಯ ಅಂತಿಮ ವಿಧಿಗಳಿಗೆ ಹಣವನ್ನು ವ್ಯವಸ್ಥೆ ಮಾಡಲು ಬಾಲಕಿ ತನ್ನ ತಾಯಿಯ ಮೃತ ದೇಹದ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡಿದ್ದಾಳೆ.

ಅಪ್ರಾಪ್ತ ಬಾಲಕಿ ಭಿಕ್ಷೆ ಬೇಡುತ್ತಿರುವ ಮತ್ತು ತನ್ನ ತಾಯಿಯ ಅಂತ್ಯಕ್ರಿಯೆಗೆ ಹಣವನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಕೆಲವು ತಿಂಗಳ ಬಾಲಕಿ ತಂದೆ ಅನಾರೋಗ್ಯದಿಂದ ನಿಧನರಾದರು, ನಂತರ ಕುಟುಂಬಕ್ಕೆ ಜೀವನ ಸಾಗಿಸಲು ಹೆಚ್ಚು ಕಷ್ಟವಾಯಿತು. ನಂತರ ಬಾಲಕಿಗೆ ಮತ್ತೊಂದು ಆಘಾತ ಎದುರಾಗಿದ್ದು, ತಾಯಿ ಕೂಡ ಮೃತಪಟ್ಟಿದ್ದಾಳೆ. ತಾಯಿಯ ಶವಸಂಸ್ಕಾರ ಮಾಡಲು ಹಣ ಇಲ್ಲದೇ ಕಂಗಾಲಾದ ಬಾಲಕಿ ಭಿಕ್ಷೆ ಬೇಡಿದ್ದಾಳೆ. ಕರುಳು ಚುರ್ ಎನಿಸುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://twitter.com/TeluguScribe/status/1825093985074835889

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read