ಬಡ ಮತ್ತು ಮಧ್ಯಮ ವರ್ಗದವರಿಗೆ ಸೂರು ಒದಗಿಸುವ ಆಶಯದ ಹಿನ್ನೆಲೆಯಲ್ಲಿ ‘ಪ್ರಧಾನಮಂತ್ರಿ ಆವಾಸ್’ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಆದರೆ ಈ ಯೋಜನೆಯ ಮೊದಲ ಕಂತಿನ ಹಣ ದೊರೆಯುತ್ತಿದ್ದಂತೆ 11 ಮಹಿಳೆಯರು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 9 ಗ್ರಾಮದ 11 ಮಹಿಳೆಯರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಕೆಲವರು ಗಂಡನನ್ನು ತೊರೆದು ತಮ್ಮ ಪ್ರಿಯಕರನ ಜೊತೆ ತೆರಳಿದ್ದರೆ ಮತ್ತಷ್ಟು ಮಂದಿ ತಮ್ಮ ತವರಿಗೆ ಮರಳಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಮುಂದಿನ ಕಂತುಗಳ ಹಣ ಬಿಡುಗಡೆಗೆ ಜಿಲ್ಲಾಧಿಕಾರಿ ತಡೆ ಒಡ್ಡಿದ್ದಾರೆ. ಅಲ್ಲದೆ ಯೋಜನೆಯ ಹಣ ದುರುಪಯೋಗಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಮರಳಿ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ.
https://twitter.com/ManojSh28986262/status/1809891108148716015?ref_src=twsrc%5Etfw%7Ctwcamp%5Etweetembed%7Ctwterm%5E1809891108148716015%7Ctwgr%5E580f24e619325194be9ecbdaab5d4a5b7d41e316%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftopindiannews-epaper-dh90d0f8f90ef3441695ffc4a0a4a51e7c%2F11womenfleefromhomesafterreceivingfirstinstallmentofpmawasyojana-newsid-n621070987