10 ವರ್ಷದ ಬಾಲಕಿಗೆ ಮದುವೆ ಮಾಡಿದ ಪೋಷಕರು: ಮನಕಲಕುತ್ತೆ ಇದರ ಹಿಂದಿನ ಕಾರಣ…!

10 year old girl gets married days before dying of cancer10 ವರ್ಷದ ಬಾಲಕಿಯೊಬ್ಬಳು ಕ್ಯಾನ್ಸರ್‌ನಿಂದ ಸಾಯುವ ಕೆಲವು ದಿನಗಳ ಮೊದಲು ಆಕೆಯ ಮದುವೆ ಆಗುವ ಕನಸನ್ನು ಪೋಷಕರು ನನಸಾಗಿಸಿದ್ದಾರೆ. ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ.

ಎಮ್ಮಾ ಎಡ್ವರ್ಡ್ಸ್, ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ ಡಿಜೆ ವಿಲಿಯಮ್ಸ್ ಜೊತೆ ಅಣಕು ವಿವಾಹದಲ್ಲಿ ಜೂನ್ 29ರಂದು ವಿವಾಹವಾದ್ರು. ಈ ಮದುವೆಯಲ್ಲಿ ಬಂಧು-ಮಿತ್ರರು ಪಾಲ್ಗೊಂಡಿದ್ದರು. ಪುತ್ರಿಯ ಕೊನೆಯ ಆಸೆಯನ್ನು ಪೋಷಕರು ನನಸಾಗಿಸಿದ್ದು, ಹೃದಯಸ್ಪರ್ಶಿಯಾಗಿದೆ.

ಏಪ್ರಿಲ್ 2022 ರಲ್ಲಿ ಎಮ್ಮಾಗೆ ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾದಿಂದ ಬಳಲುತ್ತಿದ್ದಾಳೆ ಎಂಬುದು ಗೊತ್ತಾಯಿತು. ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾವು ರಕ್ತ ಮತ್ತು ಮೂಳೆ ಮಜ್ಜೆಯ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಇದಕ್ಕೆ ಮಕ್ಕಳೇ ಹೆಚ್ಚು ಒಳಗಾಗುತ್ತಾರೆ.

ಎಮ್ಮಾ ಪೋಷಕರಾದ ಅಲೀನಾ ಮತ್ತು ಆರನ್ ಎಡ್ವರ್ಡ್ಸ್ ಅವರು ಕ್ಯಾನ್ಸರ್ ಅನ್ನು ಜಯಿಸಬೇಕೆಂದು ಹೋರಾಡಿದ್ರು. ಆದ್ರೂ ಆಕೆಯ ಕ್ಯಾನ್ಸರ್ ಅನ್ನು ಗುಣಪಡಿಸಲಾಗದು ಎಂದು ಎಮ್ಮಾ ಪೋಷಕರಿಗೆ ವೈದ್ಯರು ತಿಳಿಸಿದ್ರು. ಇನ್ನೇನು ಕೆಲವೇ ದಿನಗಳಲ್ಲಿ ಆಕೆ ಕ್ಯಾನ್ಸರ್ ನಿಂದ ಮೃತಪಡುತ್ತಾಳೆ ಎಂದು ಘೋಷಿಸಲಾಯಿತು.

ಹೀಗಾಗಿ ಪುತ್ರಿಯ ಮದುವೆಯಾಗುವ ಕನಸನ್ನು ನನಸು ಮಾಡಲು ನಿರ್ಧರಿಸಿದ ಪೋಷಕರಿಗೆ ಡಿಜೆ ವಿಲಿಯಮ್ಸ್ ತಾಯಿ ಕೂಡ ಸಾಥ್ ಕೊಟ್ರು. ಇಬ್ಬರ ತಾಯಂದಿರೂ ಎಮ್ಮಾಗೆ ಅಣಕು ವಿವಾಹವನ್ನು ಆಯೋಜಿಸಿದರು.

ಕಳೆದ ವರ್ಷದವರೆಗೂ ಎಮ್ಮಾ ಆರೋಗ್ಯವಂತಳಾಗಿದ್ದಳು. ಆದರೆ, ಒಂದು ದಿನ ಆಕೆ ಕೆಳಗೆ ಬಿದ್ದಾಗ ಆಕೆಯ ಪೋಷಕರು ಅವಳನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಅವಳ ಕಾಲಿನ ಮೂಳೆಗಳಲ್ಲಿ ಕ್ಯಾನ್ಸರ್ ಅನ್ನು ಕಂಡುಹಿಡಿದರು. ಕ್ಯಾನ್ಸರ್ ಅದಾಗಲೇ ಗಮನಾರ್ಹ ಹಾನಿಯನ್ನುಂಟು ಮಾಡಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read