ಪ್ರಯಾಣಿಕರೇ ಗಮನಿಸಿ: ಭೂಕುಸಿತ ಹಿನ್ನೆಲೆ 10 ರೈಲುಗಳ ಸಂಚಾರ ರದ್ದು

ಬೆಂಗಳೂರು: ಸಕಲೇಶಪುರ -ಬಾಳ್ಳುಪೇಟೆ ನಡುವೆ ಭೂಕುಸಿತದಿಂದಾಗಿ ಈ ಮಾರ್ಗದ 10 ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಆಗಸ್ಟ್ 12, 13ರಂದು ಕೆಎಸ್ಆರ್ ಬೆಂಗಳೂರು -ಕಾರವಾರ ಎಕ್ಸ್ ಪ್ರೆಸ್, ಎಸ್.ಎಂ.ವಿ.ಟಿ. ಬೆಂಗಳೂರು ಮುರುಡೇಶ್ವರ ಎಕ್ಸ್ ಪ್ರೆಸ್, ವಿಜಯಪುರ -ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್ ಸ್ಪೆಷಲ್ ರೈಲು ಸಂಚಾರ ರದ್ದಾಗಿದೆ.

ಆಗಸ್ಟ್ 13 ರಂದು ಕಾರವಾರ –ಕೆ.ಎಸ್.ಆರ್. ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದು ಮಾಡಲಾಗಿದೆ.

ಆಗಸ್ಟ್ 13, 14 ರಂದು ಮಂಗಳೂರು ಸೆಂಟ್ರಲ್ -ವಿಜಯಪುರ ಎಕ್ಸ್ ಪ್ರೆಸ್ ಸ್ಪೆಷಲ್ ರೈಲು ಸಂಚಾರ ರದ್ದಾಗಿದೆ.

ಆಗಸ್ಟ್ 13ರಂದು ಕಾರವಾರ –ಯಶವಂತಪುರ, ಯಶವಂತಪುರ ಕಾರವಾರ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದಾಗಿದೆ.

ಆಗಸ್ಟ್ 12, 13ರಂದು ಕಣ್ಣೂರು -ಕೆ.ಎಸ್.ಆರ್. ಬೆಂಗಳೂರು ಎಕ್ಸ್ ಪ್ರೆಸ್ ರದ್ದು ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read