ʼಪೈನಾಪಲ್ʼ ನ ಹತ್ತು ಹಲವು ಪ್ರಯೋಜನಗಳು

ಪೈನಾಪಲ್ ನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇದ್ದು ಇದು ನಿಮ್ಮ ಕಣ್ಣಿಗೆ ಮಾತ್ರವಲ್ಲ ದೇಹಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂಬುದು ನಿಮಗೆ ತಿಳಿದೇ ಇದೆ. ಅದಕ್ಕೆ ಹೊರತಾದ ನಿಮಗೆ ತಿಳಿಯದ ಕೆಲವು ಲಾಭಗಳ ಬಗ್ಗೆ ತಿಳಿಯೋಣ.

ಗಾಯವಾಗಿ ವಿಪರೀತ ರಕ್ತಸ್ರಾವ ಆಗುತ್ತಿದ್ದರೆ ಪೈನಾಪಲ್ ರಸವನ್ನು ಆದ ಮೇಲೆ ಹಾಕಿ. ಸ್ವಲ್ಪ ಹೊತ್ತು ಉರಿ ಕಂಡು ಬಂದರೂ ಆ ಬಳಿಕ ಬಹುಬೇಗ ಗಾಯ ಗುಣವಾಗುತ್ತದೆ.

ಪೈನಾಪಲ್ ಹಣ್ಣು ಸೇವನೆಯಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ. ಹೊಟ್ಟೆ ಆಗಾಗ ಕೆಡುವುದು ಇಲ್ಲವಾಗುತ್ತದೆ. ಮಲಬದ್ಧತೆ ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತದೆ. ಫೈನಾಪಲ್ ರಸವನ್ನು ತುರಿಕೆ ನವೆ ಇದ್ದ ಜಾಗಕ್ಕೆ ಹಚ್ಚಿದರೆ ಚರ್ಮದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

  ಚಿಟಿಕೆ ಕರಿಮೆಣಸಿನ ಪುಡಿ ಹಾಗೂ ಉಪ್ಪನ್ನು ಬೆರೆಸಿ ತಿಂದರೆ ಸಮಸ್ಯೆ ದೂರವಾಗುತ್ತದೆ. ಜೇನುತುಪ್ಪ ಬೆರೆಸಿ ತಿಂದರೆ ಕಾಮಾಲೆ ರೋಗವು ಗುಣವಾಗುತ್ತದೆ ಎನ್ನಲಾಗುತ್ತದೆ. ಅಸಿಡಿಟಿ ಸಮಸ್ಯೆಯನ್ನು ದೂರಮಾಡಲು ಪೈನಾಪಲ್ ಹಣ್ಣಿಗೆ ಸಕ್ಕರೆ ಬೆರೆಸಿ ತಿನ್ನಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read