ಜಮೀನನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದವನಿಗೆ 1 ವರ್ಷ ಜೈಲು, 25 ಸಾವಿರ ರೂ. ದಂಡ

ದಾವಣಗೆರೆ: ಜಮೀನನಲ್ಲಿ ಅಕ್ರಮವಾಗಿ ಗಾಂಜಾಗಿಡಗಳನ್ನು ಬೆಳೆದಿದ ಆರೋಪಿತನಿಗೆ 1 ವರ್ಷ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಲಾಗಿದೆ.

ಜಗಳೂರು ತಾಲ್ಲೂಕು ಲಕ್ಕಂಪುರ ಗ್ರಾಮದ ಈರಪ್ಪ ಬಿನ್ ಕೆಂಗಪ್ಪ ಇವರಿಗೆ ಸೇರಿದ ಸರ್ವೆ ನಂ 25ರ ಜಮೀನಿನ ಮೇಲೆ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಅಬಕಾರಿ ಉಪಅಧೀಕ್ಷಕರ ಮಾರ್ಗದರ್ಶನದಲ್ಲಿ 2021 ಆ. 26ರಂದು ಅಬಕಾರಿ ದಾಳಿ ಮಾಡಲಾಗಿತ್ತು. ಜಮೀನನಲ್ಲಿ ಅಕ್ರಮವಾಗಿ 3,480 ಕೆ.ಜಿ ಗಾಂಜಾ ಗಿಡಗಳನ್ನು ಬೆಳೆದಿರುವುದು ಕಂಡು ಬಂದಿದ್ದು, ಗಾಂಜಾ ಸಮೇತ ಜಮೀನಿನ ಮಾಲೀಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು.

ಅಬಕಾರಿ ಉಪ ನಿರೀಕ್ಷಕರಾದ ಎನ್. ಸಾವಿತ್ರಿ ಪ್ರಕರಣ ತನಿಖೆಯನ್ನು ನಡೆಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶರು ಆರೋಪಿಗೆ ಒಂದು ವರ್ಷ ಶಿಕ್ಷೆ ಮತ್ತು 25,000 ರೂ.ದಂಡ ವಿಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read