ಇಷ್ಟೆಲ್ಲಾ ಮ್ಯಾಜಿಕ್‌ ಮಾಡುತ್ತೆ 1 ಚಮಚ ʼತುಪ್ಪʼ

ತುಪ್ಪ ಭಾರತದ ಸೂಪರ್‌ ಫುಡ್‌ ಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ತುಪ್ಪದ ಘಮ ಮತ್ತು ರುಚಿ ಇಡೀ ವಿಶ್ವವನ್ನೇ ಆವರಿಸಿಕೊಳ್ತಾ ಇದೆ. ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ.

ಅನಾರೋಗ್ಯಕರ ತಿನಿಸುಗಳ ಸೇವನೆ, ಮಾನಸಿಕ ಒತ್ತಡ, ನಿದ್ದೆಯ ಕೊರತೆ, ದೈಹಿಕ ಚಟುವಟಿಕೆಯ ಕೊರತೆ, ಆಂಟಿಬಯೊಟಿಕ್ಸ್‌ ಸೇವನೆ ಇವೆಲ್ಲ ಮಲಬದ್ಧತೆಗೆ ಮೂಲಕ ಕಾರಣಗಳು. ಇದನ್ನು ಸರಿಪಡಿಸುವ ಶಕ್ತಿ ತುಪ್ಪಕ್ಕಿದೆ.

ತುಪ್ಪದಲ್ಲಿ ಆಂಟಿಒಕ್ಸಿಡೆಂಟ್ಸ್‌ ಮತ್ತು ಒಮೆಗಾ 3 ಹೇರಳವಾಗಿದೆ. ಇನ್ನಷ್ಟು ಯಂಗ್‌ ಆಗಿ ಕಾಣಲು ಸಹ ಇದು ಸಹಾಯ ಮಾಡಬಲ್ಲದು. ತೂಕ ಇಳಿಸಲು ಕೂಡ ತುಪ್ಪ ಸಹಕಾರಿಯಾಗಿದೆ.

ನಿಮ್ಮ ದೇಹಕ್ಕೆ ಆರೋಗ್ಯಕರ ಕೊಬ್ಬಿನಾಂಶ ಬೇಕು. ಎ2 ಹಸುವಿನ ತುಪ್ಪದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್‌ ಇದ್ದು, ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯಕರ ಕೊಬ್ಬನ್ನು ಇದು ಒದಗಿಸಿಕೊಡುತ್ತದೆ.

ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲ ಸ್ರವಿಸುವಿಕೆ ಉಂಟಾಗಿ, ಆಹಾರ ಪದಾರ್ಥಗಳು ಬಹುಬೇಗ ಜೀರ್ಣವಾಗುತ್ತವೆ. ನಿಮಗೆ ಹೊಳೆಯುವ ಮುಖ ಕಾಂತಿ ಹೊಂದಲು ಕೂಡ ತುಪ್ಪ ಸಹಾಯ ಮಾಡುತ್ತದೆ.

ಅನಿಯಮಿತ ಕರುಳಿನ ಚಲನೆಯನ್ನು ತುಪ್ಪ ಗುಣಪಡಿಸುತ್ತದೆ. ನಿಮ್ಮ ಹಸಿವನ್ನು ದೀರ್ಘಕಾಲದವರೆಗೆ ನಿಯಂತ್ರಿಸುತ್ತದೆ. ತುಪ್ಪವು ನಮಗೆ ತೃಪ್ತಿಯನ್ನು ನೀಡುತ್ತದೆ ಮತ್ತು ಅನಾರೋಗ್ಯಕರ ಕಡುಬಯಕೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ.

ಸ್ನೇಹಿ ಕಿಣ್ವಗಳೊಂದಿಗೆ ನಿಮ್ಮ ಕರುಳನ್ನು ಸುಧಾರಿಸುತ್ತದೆ. ನಿಮ್ಮ ಮೂಳೆಗಳಲ್ಲಿ ಶಕ್ತಿ ಮತ್ತು ತ್ರಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನ ತಪ್ಪದೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read