ಇಂದಿನಿಂದ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 1 ಸಾವಿರ ರೂ. ಜಮಾ: ಹೊಸ ಯೋಜನೆಗೆ ಸಿಎಂ ಸ್ಟಾಲಿನ್ ಚಾಲನೆ

ಚೆನ್ನೈ: ಮಹಿಳೆಯರ ಖಾತೆಗೆ ಪ್ರತಿ ತಿಂಗಳು 1000 ರೂ. ಜಮಾ ಮಾಡುವ ಕಲೈಂಗರ್ ಮಹಿಳೆಯರ ಹಕ್ಕು ಯೋಜನೆ ಇಂದು ಶುಭಾರಂಭವಾಗಲಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶುಕ್ರವಾರ ಬೆಳಗ್ಗೆ 10 ಗಂಟೆಗೆ ‘ಕಲೈಂಗರ್ ಮಹಿಳೆಯರ ಹಕ್ಕು ಯೋಜನೆ’ಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿ ತಮಿಳುನಾಡಿನಾದ್ಯಂತ ಒಂದು ಕೋಟಿ ಮಹಿಳೆಯರಿಗೆ ಪ್ರಯೋಜನ ಸಿಗಲಿದೆ. ಪ್ರತಿ ತಿಂಗಳು ಅವರ ಖಾತೆಗೆ ಒಂದು ಸಾವಿರ ರೂಪಾಯಿ ಜಮಾ ಮಾಡಲಾಗುವುದು. ಸಿಎಂ ಸ್ಟಾಲಿನ್ ಯೋಜನೆಗೆ ಚಾಲನೆ ನೀಡಲಿದ್ದು, ತಮಿಳುನಾಡಿನಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿ, ಸರ್ಕಾರದ ಪ್ರಮುಖ ಮಹಿಳಾ ಹಕ್ಕು ಯೋಜನೆಯಾದ ಕಲೈಂಜರ್ ಮಗಳಿರ್ ಉರಿಮೈ ತೊಗೈ ತಿಟ್ಟಂ ಅಡಿಯಲ್ಲಿ 1.06 ಕೋಟಿ ಮಹಿಳೆಯರು ಮಾಸಿಕ 1,000 ರೂ. ಭತ್ಯೆಗೆ ಅರ್ಹರಾಗಿದ್ದಾರೆ. ಡಿಎಂಕೆ ಚುನಾವಣಾ ಪೂರ್ವ ಭರವಸೆ ನೀಡಿದ ಈ ಯೋಜನೆಯಡಿ ಲಾಭ ಪಡೆಯಲು ಇದುವರೆಗೆ ಸುಮಾರು 1.63 ಕೋಟಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಯೋಜನೆ ಜಾರಿಯಾಗಲಿದೆ. ಈ ಯೋಜನೆಗೆ ವಾರ್ಷಿಕ 12,000 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read