ಹೊಸ ವರ್ಷಾಚರಣೆ; ಸ್ವಿಗ್ಗಿಗೆ ಬಂದ ಬಿರಿಯಾನಿ ಆರ್ಡರ್ ಎಷ್ಟು ಗೊತ್ತಾ…..?

ಮುಂಬೈ; ಹೊಸ ವರ್ಷವನ್ನು ಜನ ತುಂಬಾ ವಿಜ್ರಂಭಣೆಯಿಂದ ಬರಮಾಡಿಕೊಂಡಿದ್ದಾರೆ. ಹಾಡಿ, ಕುಣಿದು ನ್ಯೂ ಇಯರ್ ಸ್ವಾಗತ ಮಾಡಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾರ್ಮೋಡ ಇತ್ತು. ಹೀಗಾಗಿ ಸೆಲಿಬ್ರೇಷನ್ ಗೆ ಬ್ರೇಕ್ ಬಿದ್ದಿತ್ತು‌. ಆದರೆ ಈ ವರ್ಷ ಯಾವುದೇ ರೂಲ್ಸ್ ಇಲ್ಲದೆ ಜನ ನಿರಾತಂಕವಾಗಿ ಹೊಸ ವರ್ಷ ಆಚರಿಸಿದರು.

ಇದರ ಜೊತೆಗೆ ಮತ್ತೊಂದು ವಿಶೇಷ ಅಂದರೆ ಈ ಬಾರಿ ಸ್ವಿಗ್ಗಿಯಿಂದ ದಾಖಲೆ ಮಟ್ಟದಲ್ಲಿ ಪಿಜ್ಜಾ, ಬಿರಿಯಾನಿ ಡೆಲವರಿ ಆಗಿದೆ. ಹೌದು, 3.50 ಲಕ್ಷ ಬಿರಿಯಾನಿ ಆರ್ಡರ್‌ ಗಳನ್ನು ವಿತರಿಸಿರುವ ಸ್ವಿಗ್ಗಿ ರಾತ್ರಿ 10.25 ರ ಹೊತ್ತಿಗೆ 61,000 ಪಿಜ್ಜಾಗಳನ್ನು ಡೆಲಿವರಿ ಮಾಡಿದೆಯಂತೆ‌. ಈ ವಿಚಾರವನ್ನು ಸ್ವತಃ ಕಂಪನಿ ಮೂಲಗಳು ತಿಳಿಸಿವೆ. ಇದರ ಜೊತೆಗೆ ಹೈದರಾಬಾದಿನ ಬಿರಿಯಾನಿಗೆ ಹೆಚ್ಚು ಬೇಡಿಕೆ ಬಂದಿತ್ತಂತೆ. ಅಂದರೆ ಶೇಕಡಾ 75.4 ರಷ್ಟು ಆರ್ಡರ್‌ಗಳು ಈ ಬಿರಿಯಾನಿಗೆ ಬಂದಿವೆ.

ಇನ್ನು, ಡೊಮಿನೋಸ್ ಇಂಡಿಯಾವು ಕೂಡ 61,287 ಪಿಜ್ಜಾಗಳನ್ನು ವಿತರಣೆ ಮಾಡಿದೆ‌. ಇನ್ನು, ಹೈದರಾಬಾದ್‌ ನ ಬಿರಿಯಾನಿ ಮಾರಾಟದಲ್ಲೇ ಮೊದಲಿರುವ ರೆಸ್ಟೋರೆಂಟ್‌ ಗಳಲ್ಲಿ ಒಂದಾದ ಬವಾರ್ಚಿ ರೆಸ್ಟೋರೆಂಟ್ ಒಟ್ಟು 15 ಟನ್ ಬಿರಿಯಾನಿ ಸಿದ್ಧಪಡಿಸಿತ್ತಂತೆ. ಒಟ್ನಲ್ಲಿ ಜನ ಹೊಸ ವರ್ಷವನ್ನು ಬಿರಿಯಾನಿ, ಪಿಜ್ಜಾ ತಿನ್ನುವ ಮೂಲಕವೂ ಆಚರಣೆ ಮಾಡಿದ್ದಾರೆ‌.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read