ಹೊಟ್ಟೆಯ ಕೊಬ್ಬನ್ನು ಕರಗಿಸಿ ಬೇಗನೆ ತೂಕ ಇಳಿಸುತ್ತದೆ ಈ ಹಸಿರು ಬಣ್ಣದ ಕಾಫಿ….!

ತೂಕವು ತುಂಬಾ ಹೆಚ್ಚಾದಾಗ ದೇಹದ ಆಕಾರವು ಕ್ಷೀಣಿಸಲು ಪ್ರಾರಂಭಿಸುತ್ತದೆ. ಹಾಗಾಗಿ ತೂಕದ ಬಗ್ಗೆ ಜಾಗರೂಕರಾಗಿರಬೇಕು. ಸ್ಥೂಲಕಾಯತೆ ಒಂದು ರೋಗವಲ್ಲ, ಆದರೆ ಅದರಿಂದ ಹೆಚ್ಚಿನ ಕೊಲೆಸ್ಟ್ರಾಲ್, ಹೃದಯಾಘಾತ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಇತರ ಕಾಯಿಲೆಗಳ ಅಪಾಯವಿದೆ. ಇದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಆರೋಗ್ಯಕರ ಆಹಾರದ ಸೇವನೆ.

ಆಗ ಮಾತ್ರ ಹೊಟ್ಟೆ ಮತ್ತು ಸೊಂಟದ ಮೇಲೆ ಸಂಗ್ರಹವಾದ ಕೊಬ್ಬು ಕಡಿಮೆಯಾಗುತ್ತದೆ. ತೂಕವನ್ನು ಕಳೆದುಕೊಳ್ಳಲು ಗ್ರೀನ್ ಟೀ ಸೇರಿದಂತೆ ಅನೇಕ ಗಿಡಮೂಲಿಕೆ ಚಹಾಗಳನ್ನು ನೀವು ಸೇವಿಸಿರಬೇಕು. ಆದರೆ ಒಮ್ಮೆ ಹಸಿರು ಕಾಫಿಯನ್ನು ಪ್ರಯತ್ನಿಸಿ ನೋಡಿ. ಇದನ್ನು ವಿಶೇಷ ತರಕಾರಿಯಿಂದ  ತಯಾರಿಸಲಾಗುತ್ತದೆ.

ಪ್ರತಿದಿನ ಕುಡಿಯಿರಿ ಬ್ರೊಕೊಲಿ ಕಾಫಿ

ಬ್ರೊಕೊಲಿ ಕಾಫಿ ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗಿದೆ. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಈ ಪಾನೀಯದ ಪರಿಕಲ್ಪನೆಯನ್ನು ಆಸ್ಟ್ರೇಲಿಯಾದ ಕಾಮನ್‌ವೆಲ್ತ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಶನ್ ನೀಡಿದೆ. ಸಾಕಷ್ಟು ತರಕಾರಿಗಳನ್ನು ತಿನ್ನಲು ಸಾಧ್ಯವಾಗದವರಿಗೆ ಬ್ರೊಕೊಲಿ ಪೌಡರ್ ಉತ್ತಮ ಆಯ್ಕೆಯಾಗಿದೆ.

ಬ್ರೊಕೊಲಿ ಕಾಫಿ ಮೂಲಕ ತೂಕ ಕಳೆದುಕೊಳ್ಳುವುದು ಹೇಗೆ?

ಬ್ರೊಕೊಲಿ ಕಾಫಿಯು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.  ಏಕೆಂದರೆ ಇದು ಕಡಿಮೆ ಕ್ಯಾಲೋರಿ ಹೊಂದಿರುವ ಪಾನೀಯವಾಗಿದೆ. ಇದರಲ್ಲಿ ಫೈಬರ್‌ ಕೂಡ ಸಮೃದ್ಧವಾಗಿದೆ. ಬ್ರೊಕೊಲಿಯಲ್ಲಿ ತೂಕ ನಷ್ಟಕ್ಕೆ ಸಹಕಾರಿಯಾದ ಅನೇಕ ಪೋಷಕಾಂಶಗಳಿವೆ. ಇದನ್ನು ಸೇವಿಸಿದರೆ ಬಹಳ ಹೊತ್ತಿನವರೆಗೆ ಹಸಿವಾಗುವುದಿಲ್ಲ.ಬ್ರೊಕೊಲಿ ಕಾಫಿಯಲ್ಲಿ ಮೈಕ್ರೊನ್ಯೂಟ್ರಿಯೆಂಟ್‌ಗಳು ಕಂಡುಬರುತ್ತವೆ. ಇದು ಕೊಬ್ಬನ್ನು ಒಡೆಯುವ ಮೂಲಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬ್ರೊಕೊಲಿ ಕಾಫಿಯನ್ನು ತಯಾರಿಸುವುದು ಹೇಗೆ?

ಬ್ರೊಕೊಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಬಿಸಿಲಿನಲ್ಲಿ ಒಣಗಿಸಿ.ಚೆನ್ನಾಗಿ ಒಣಗಿದ ಬಳಿಕ ಅದನ್ನು ಪುಡಿ ಮಾಡಿ ಏರ್‌ ಟೈಟ್‌ ಕಂಟೇನರ್‌ನಲ್ಲಿ ಸಂಗ್ರಹಿಸಿ ಇಡಿ. ಮಾರುಕಟ್ಟೆಯಲ್ಲಿ ಕೂಡ ಬ್ರೊಕೊಲಿ ಪುಡಿ ಲಭ್ಯವಿದೆ. ಒಂದು ಲೋಟ ಹಾಲನ್ನು ಬಿಸಿ ಮಾಡಿಕೊಂಡು ಅದಕ್ಕೆ ಬ್ರೊಕೊಲಿ ಪುಡಿಯನ್ನು ಬೆರೆಸಿ ಕುಡಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read