ಹೊಂಡಕ್ಕೆ ಬಿದ್ದ ಮಗು ರಕ್ಷಣೆ ಮಾಡಲು ಹೋಗಿ ಇಬ್ಬರು ಯುವತಿಯರ ಸಾವು

ಬಟ್ಟೆ ತೊಳೆಯಲೆಂದು ಮಕ್ಕಳ ಜೊತೆ ನೀರು ತುಂಬಿದ್ದ ಕಲ್ಲು ಕ್ವಾರಿಗೆ ಹೋಗಿದ್ದ ಇಬ್ಬರು ಯುವತಿಯರು ಆರು ವರ್ಷದ ಮಗು ನೀರಿಗೆ ಬಿದ್ದ ವೇಳೆ ಅದರ ರಕ್ಷಣೆ ಮಾಡಲು ಹೋಗಿ ಸಾವನ್ನಪ್ಪಿದ್ದಾರೆ.

ಇಂತಹದೊಂದು ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಮಂಟಿ ಗ್ರಾಮದಲ್ಲಿ ನಡೆದಿದ್ದು, ತಮಿಳುನಾಡು ಮೂಲದ ರಾಮಭೋವಿ ಹಾಗೂ ಕುಮಾರ್ ಅವರ ಮಕ್ಕಳಾದ ಲೀನಾಮತಿ ಹಾಗೂ ಮೀನಾ ಮೃತಪಟ್ಟವರಾಗಿದ್ದಾರೆ.

ಈ ಹಿಂದೆ ಇಲ್ಲಿ ಗಣಿಗಾರಿಕೆ ಮಾಡಲಾಗಿದ್ದು, ಕಲ್ಲು ಕ್ವಾರಿಯಲ್ಲಿ ನೀರು ತುಂಬಿದ್ದ ಕಾರಣ ಬಟ್ಟೆ ತೊಳೆಯಲು ಇವರುಗಳು ಮಕ್ಕಳ ಜೊತೆ ತೆರಳಿದ್ದರು. ನೀರಿಗೆ ಬಿದ್ದ ಮಗುವಿನ ರಕ್ಷಣೆಗೆ ಹೋದಾಗ ಈ ಅವಘಡ ಸಂಭವಿಸಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read