ಹೆಸರುಬೇಳೆಯಿಂದ ಚರ್ಮದ ‘ಸೌಂದರ್ಯ’ ಹಾಗೂ ಕೂದಲಿನ ‘ಆರೋಗ್ಯ’ ಹೆಚ್ಚಿಸುವುದು ಹೇಗೆ ಗೊತ್ತಾ…..?

ಹೆಸರುಬೇಳೆಯಿಂದ ಕೇವಲ ಅಡುಗೆ ಮಾಡಲು ಮಾತ್ರವಲ್ಲ ಅದರಿಂದ ನಮ್ಮ ಸ್ಕಿನ್ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಯಿಂದ ಚರ್ಮದ ಮೇಲಾಗುವ ಸನ್ ಟ್ಯಾನ್, ಕಲೆಗಳು ಮತ್ತು ಮೊಡವೆಗಳಿಗೆ ಉತ್ತಮವಾದ ಪರಿಹಾರವನ್ನು ನೀಡುತ್ತದೆ.

ಚರ್ಮದ ಸೌಂದರ್ಯಕ್ಕೆ :

ಒಂದು ಚಮಚ ಆಲಿವ್ ಎಣ್ಣೆ ಮತ್ತು ½ ಚಮಚ ಹೆಸರುಬೇಳೆ ಪುಡಿಯನ್ನು ಮಿಶ್ರ ಮಾಡಿಕೊಂಡು, ತ್ವಚೆಗೆ ಮತ್ತು ಕೈ ಕಾಲುಗಳಿಗೆ ಅಪ್ಲೈ ಮಾಡಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ 2 ಬಾರಿ ಹೀಗೆ ಮಾಡಿಕೊಂಡಲ್ಲಿ ಚರ್ಮದ ಕಾಂತಿಯು ಹಿಮ್ಮಡಿಗೊಳ್ಳುತ್ತದೆ.

½ ಚಮಚ ಹೆಸರುಬೇಳೆ ಪುಡಿ ಮತ್ತು ಒಂದು ಚಮಚ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ, ಮುಖದ ತ್ವಚೆಯ ಮೇಲೆ ಲೇಪಿಸಿ 5-10 ನಿಮಿಷ ಹಾಗೆಯೇ ಬಿಟ್ಟು, ವಾಶ್ ಮಾಡಿಕೊಳ್ಳಿ. ವಾರದಲ್ಲಿ ಒಂದು ಬಾರಿ ಹೀಗೆ ಮಾಡುವುದರಿಂದ ಮೊಡವೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು.

ಕೂದಲಿನ ಆರೋಗ್ಯಕ್ಕೆ :

½ ಚಮಚ ಹೆಸರುಬೇಳೆ ಪುಡಿ, 2 ಚಮಚ ಆಮ್ಲ ರಸದೊಂದಿಗೆ ಬೆರೆಸಿ, ಕೂದಲಿನ ಸ್ಕಾಲ್ಪ್ ಗೆ ಅಪ್ಲೈ ಮಾಡಿ. ಒಂದು ಗಂಟೆಯ ನಂತರ ಸೀಗೆಕಾಯಿ ಪುಡಿಯನ್ನು ಬಳಸಿ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಬೇಳೆಯಲ್ಲಿರುವ ಪ್ರೋಟೀನ್ಸ್ ಕೂದಲಿನ ಬೇರುಗಳಿಗೆ ಶಕ್ತಿ ನೀಡಿ, ಆರೋಗ್ಯವಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

2 ಚಮಚ ಬೇವಿನ ರಸದೊಂದಿಗೆ ½ ಚಮಚ ಹೆಸರುಬೇಳೆ ಪುಡಿಯನ್ನು ಮಿಶ್ರಣ ಮಾಡಿ, ತಲೆಯ ಕೂದಲಿನ ಭಾಗಕ್ಕೆ ಲೇಪಿಸಿ 20 ನಿಮಿಷ ಹಾಗೆಯೇ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಬೇವಿನಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಲ್ ಅಂಶವು ತಲೆಹೊಟ್ಟಿನಿಂದ ಮುಕ್ತಿಗೊಳಿಸಿ, ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read