ಮೀಸೆ ಹೇಳುತ್ತೆ ಹುಡುಗ್ರ ʼವ್ಯಕ್ತಿತ್ವʼ

ಇದು ಫ್ಯಾಷನ್ ಯುಗ. ಫ್ಯಾಷನ್ ಮಾಡೋದ್ರಲ್ಲಿ ಹುಡುಗ್ರೂ ಹಿಂದೆ ಬಿದ್ದಿಲ್ಲ. ಫ್ಯಾಷನ್ ಬದಲಾದಂತೆ ಹುಡುಗ್ರು ಕೂಡ ತಮ್ಮ ಸ್ಟೈಲ್ ಬದಲಿಸಿಕೊಳ್ತಿದ್ದಾರೆ. ಸಾಮಾನ್ಯವಾಗಿ ಮಾನವನ ಅಂಗ ನೋಡಿ ಅವ್ರ ಸ್ವಭಾವ ಹೇಳಬಹುದು. ಹಾಗೆ ಹುಡುಗ್ರ ಮೀಸೆ ನೋಡಿ ಅವ್ರ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳಬಹುದು.

ಅಂಕುಡೊಂಕಾದ, ಉದ್ದವಾದ, ನೇರವಾದ ಮೀಸೆಯುಳ್ಳವರು ಧೈರ್ಯಶಾಲಿಗಳಾಗಿರುತ್ತಾರಂತೆ. ವೀರರಾಗಿರುವ ಅವ್ರು, ಯಾವುದಕ್ಕೂ ಹೆದ್ರುವುದಿಲ್ಲವಂತೆ. ಕೋಪದಲ್ಲಿ ಆಕ್ರಮಣಕಾರಿಯಾಗಿರುವ ವ್ಯಕ್ತಿಗೆ ಅರೆ ಕ್ಷಣದಲ್ಲಿ ಕೋಪ ಬರುತ್ತದೆ.

ಮೀಸೆ ಕೆಳಮುಖವಾಗಿದ್ದರೆ ಅಂಥ ವ್ಯಕ್ತಿ ವಿವೇಕಿಯಾಗಿರುತ್ತಾನೆ. ಸಮಯ ಪ್ರಜ್ಞೆ, ಸಹನೆಯನ್ನು ಹೊಂದಿರುತ್ತಾನೆ.

ಪಾತರಗಿತ್ತಿಯಂತೆ ಕಾಣುವ ಮೀಸೆ ಹೊಂದಿರುವ ವ್ಯಕ್ತಿ ವಾಕ್ಚತುರನಾಗಿರುತ್ತಾನೆ. ತಿಳುವಳಿಕೆಯುಳ್ಳ ವ್ಯಕ್ತಿತ್ವ ಹೊಂದಿರುತ್ತಾನೆ.

ಕುರುಚಲು ಮೀಸೆ ಹೊಂದಿರುವ ವ್ಯಕ್ತಿ ಆದರ್ಶ, ಸಿದ್ದಾಂತ, ತ್ಯಾಗ ಮತ್ತು ಸಾಹಿತ್ಯ ಪ್ರೇಮ ಹೊಂದಿರುತ್ತಾನೆ.

ಹಾಗೆ ಮೀಸೆ, ಗಡ್ಡವನ್ನು ಬಿಡದೆ, ಸಮಯಕ್ಕೆ ಸರಿಯಾಗಿ ಅದನ್ನು ತೆಗೆಯುವ ವ್ಯಕ್ತಿ ಮೊಂಡುತನ, ತೋರ್ಪಡಿಕೆ ಗುಣವನ್ನು ಇಷ್ಟಪಡುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read