ಹುಂಡೈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌; ಆಫರ್‌ ಮುಗಿಯುವ ಮುನ್ನ ಖರೀದಿಸಿಬಿಡಿ

ಭಾರತದಲ್ಲಿನ ಅತಿದೊಡ್ಡ ಕಾರು ತಯಾರಕರಲ್ಲಿ ಒಂದಾದ ಹುಂಡೈ ಕಂಪನಿ ಈ ತಿಂಗಳು ಕೆಲವು ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಹುಂಡೈನ Grand i10 Nios, Aura, i20, i20 N Line ಮತ್ತು Kona EV ಕಾರುಗಳ ಮೇಲೆ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್‌ ಸಿಗಲಿದೆ.

Hyundai Grand i10 Nios

ಈ ಕಾರಿನ ಮೇಲೆ 25,000 ರೂಪಾಯಿವರೆಗೆ ನಗದು ರಿಯಾಯಿತಿ ನೀಡಲಾಗುತ್ತಿದೆ. ಇದರೊಂದಿಗೆ ಕಂಪನಿಯು ಹೆಚ್ಚುವರಿಯಾಗಿ 10,000 ರೂಪಾಯಿ ಡಿಸ್ಕೌಂಟ್‌ ನೀಡುತ್ತಿದೆ. POI / ಕಾರ್ಪೊರೇಟ್ ಗ್ರಾಹಕರು 3,000 ರೂಪಾಯಿವರೆಗೆ ರಿಯಾಯಿತಿ. ಹಾಗಾಗಿ ಒಟ್ಟಾರೆ ಡಿಸ್ಕೌಂಟ್‌ ಸುಮಾರು 38,000 ರೂಪಾಯಿವರೆಗಿದೆ.

Hyundai Aura

ಹ್ಯುಂಡೈ ಔರಾ ಕಾಂಪ್ಯಾಕ್ಟ್ ಸೆಡಾನ್ ಕಾರು ಕೊಳ್ಳುವವರಿಗೆ 20,000 ರೂಪಾಯಿಗಳ ನಗದು ರಿಯಾಯಿತಿ ಮತ್ತು 10,000 ರೂಪಾಯಿಗಳವರೆಗೆ ಎಕ್ಸ್‌ಚೇಂಜ್‌ ಡಿಸ್ಕೌಂಟ್‌ ನೀಡಲಾಗ್ತಿದೆ. POI / ಕಾರ್ಪೊರೇಟ್ ಗ್ರಾಹಕರು ಪ್ರತ್ಯೇಕವಾಗಿ 3,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತಿದ್ದಾರೆ. ಈ ಮೂಲಕ ಇದರ ಮೇಲಿನ ಒಟ್ಟು ಆಫರ್ 33,000ಕ್ಕೆ ಏರಿದೆ.

Hyundai i20 ಮತ್ತು i20 N Line

ಹ್ಯುಂಡೈ i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವುದರಿಂದ ಅದರ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ಟ್ರಿಮ್‌ಗಳಲ್ಲಿ 10,000 ರೂಪಾಯಿವರೆಗೆ ನಗದು ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಗ್ರಾಹಕರು ಹಳೆಯ ಕಾರನ್ನು ವಿನಿಮಯ ಮಾಡಿಕೊಂಡ್ರೆ 10,000 ರೂಪಾಯಿವರೆಗೆ ಹೆಚ್ಚುವರಿ ಡಿಸ್ಕೌಂಟ್‌ ಗಿಟ್ಟಿಸಿಕೊಳ್ಳಬಹುದು. i20 ಕಾರಿನ ಮೇಲೆ ಒಟ್ಟು 20,000 ರೂಪಾಯಿವರೆಗಿನ ಕೊಡುಗೆಯಿದೆ.

Hyundai Kona EV 

ಹುಂಡೈನ ಎಲೆಕ್ಟ್ರಿಕ್ ಎಸ್‌ಯುವಿ ಕೋನಾ ಇವಿ ಕಾರಿಗೆ 50,000 ರೂಪಾಯಿಗಳವರೆಗೆ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. ಕಾರ್ ವಿನಿಮಯ ಎಕ್ಸ್‌ಚೇಂಜ್‌ ಹಾಗೂPOI/ಕಾರ್ಪೊರೇಟ್ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ರಿಯಾಯಿತಿ ಲಭ್ಯವಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read