ಅಂಗಡಿ ಮಾಲೀಕನ ಮೇಲೆ ಹಾಡಹಗಲೇ ಗುಂಡು ಹಾರಿಸಿದ ಇಬ್ಬರು ಮುಸುಕುಧಾರಿಗಳನ್ನ ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಜಬಲ್‌ಪುರದ ಮಧೋಟಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಸಾಲೆ ಅಂಗಡಿ ಮಾಲೀಕನ ಮೇಲೆ ಹಗಲು ಹೊತ್ತಿನಲ್ಲಿ ಗುಂಡು ಹಾರಿಸಿದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳನ್ನು ಜಬಲ್‌ಪುರ ಪೊಲೀಸರು ಬಂಧಿಸಿದ್ದಾರೆ. ಇಡೀ ಘಟನೆಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ, ಇಬ್ಬರು ವ್ಯಕ್ತಿಗಳು ಸರಕುಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಯವನನ್ನು ಸಮೀಪಿಸುತ್ತಿರುವುದನ್ನು ಕಾಣಬಹುದು. ಆಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿ ಓಡಿ ಹೋಗಿದ್ದಾನೆ.
ಘಟನೆಯ ಬಗ್ಗೆ ಬೆಳಕು ಚೆಲ್ಲಿರುವ ಜಬಲ್‌ಪುರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಸಂಜಯ್ ಅಗರ್‌ವಾಲ್, “ಭಾನುವಾರ ಮಧ್ಯಾಹ್ನ, ಬೈಕ್‌ನಲ್ಲಿ ಬಂದ ಮುಸುಕುಧಾರಿ ದುಷ್ಕರ್ಮಿಗಳು ತಿಲವಾರದ ನಿವಾಸಿ ಛೋಟು ಪಟೇಲ್ ಅಲಿಯಾಸ್ ಖುಷಿರಾಮ್ (22) ಅವರ ಮೇಲೆ ಗುಂಡು ಹಾರಿಸಿದ್ದಾರೆ. ಛೋಟು ಪಟೇಲ್ ಹೊಟ್ಟೆಗೆ ಗುಂಡು ತಗುಲಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದಿದ್ದಾರೆ.
ಕೆಲ ದಿನಗಳ ಹಿಂದೆ ರಾಮನಗರದ ನಿವಾಸಿ ಧರ್ಮೇಂದ್ರ ವೈದೇಹಿ ಜತೆ ಛೋಟು ಪಟೇಲ್ ಜಗಳ ಮಾಡಿಕೊಂಡಿದ್ದರು ಎಂದು ಸಂತ್ರಸ್ತೆಯ ಕುಟುಂಬದ ಸದಸ್ಯರು ಪೊಲೀಸ್ ತಂಡಕ್ಕೆ ತಿಳಿಸಿದ್ದಾರೆ. ಆಗ ಛೋಟು ಮೇಲೆ ಗುಂಡು ಹಾರಿಸಿದ ಆರೋಪಿಗಳು ಪಟಾಣ್ ಬೈಪಾಸ್ ಬಳಿ ನಿಂತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಪೊಲೀಸರು ಸ್ಥಳಕ್ಕಾಗಮಿಸಿ ಪ್ರದೇಶವನ್ನು ಸುತ್ತುವರೆದಾಗ ಇಬ್ಬರು ಬೈಕ್‌ನಲ್ಲಿದ್ದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಆರೋಪಿ ಧರ್ಮೇಂದ್ರ ವೈದೇಹಿ ಬುಲೆಟ್ ಬೈಕ್‌ನೊಂದಿಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ವೈದೇಹಿ, ಛೋಟು ಹತ್ಯೆಗೆ ಇಬ್ಬರು ಪಿಸ್ತೂಲ್ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ವೈದೇಹಿಯಿಂದ ಕಂಟ್ರಿಮೇಡ್ ಪಿಸ್ತೂಲ್ ಮತ್ತು ಕಾಟ್ರಿಡ್ಜ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮತ್ತೊಬ್ಬನನ್ನೂ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
https://twitter.com/fpjindia/status/1622877557698985984?ref_src=twsrc%5Etfw%7Ctwcamp%5Etweetembed%7Ctwterm%5E1622877557698985984%7Ctwgr%5E803f3c9ad07c44593b833c0ede4a488baf175444%7Ctwcon%5Es1_&ref_url=https%3A%2F%2Fwww.freepressjournal.in%2Fbhopal%2Fmadhya-pradesh-shopkeeper-shot-at-in-broad-daylight-in-jabalpur-cctv-footage-captures-crime