ʼಹಲಸಿನ ಕಾಯಿʼ ಸೇವಿಸುವುದರಿಂದ ಇದೆ ಹಲವು ಆರೋಗ್ಯಕಾರಿ ಪ್ರಯೋಜನ

ಹಲಸಿನ ಕಾಯಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ನಾರಿನಂಶ ಇರುವುದರಿಂದ ಮಧುಮೇಹಿಗಳ ಅತ್ಯುತ್ತಮ ಆಹಾರ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಹಲಸಿನ ಹಣ್ಣನ್ನು ದೋಸೆ, ಇಡ್ಲಿ, ಮುಳಕ ರೂಪದಲ್ಲಿ ಸೇವಿಸುತ್ತೇವೆ. ಸಂಶೋಧನೆಯೊಂದರ ಪ್ರಕಾರ ಅನ್ನ,ಗೋಧಿ ಬದಲಿಗೆ ಹಲಸಿನ ಕಾಯಿಯನ್ನು ಸೇವಿಸಬಹುದು. ಇದನ್ನು ಹಿಟ್ಟಿನ ರೂಪದಲ್ಲಿ ಬಳಕೆ ಮಾಡುವುದರಿಂದ ಕಾರ್ಬೋಹೈಡ್ರೇಟ್ ಗಳು ಕಡಿಮೆ ಆಗುತ್ತವೆ. ಕ್ಯಾಲರಿಗಳನ್ನು ಕಡಿಮೆ ಮಾಡಿ ತೂಕ ಇಳಿಸಲು ನೆರವಾಗುತ್ತವೆ.

ಇದೊಂದು ಸ್ಥಳೀಯ ಆಹಾರವೂ ಆಗಿರುವುದರಿಂದ ಇದರಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ಹೆಚ್ಚು ಉಪಕಾರಿಯಾದವು ಎಂಬುದನ್ನು ಸಂಶೋಧನೆ ದೃಢಪಡಿಸಿದೆ. ಹಲಸಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ದೇಹದಲ್ಲಿ ಶಕ್ತಿ ಬಲವರ್ಧನೆ ಆಗುವುದರ ಜೊತೆ ಕ್ಯಾನ್ಸರ್ ಗುಣಕಾರಿಯಾಗಿಯೂ ಬಳಕೆಯಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read