ಹನುಮಂತನನ್ನು ಪ್ರಸನ್ನಗೊಳಿಸಲು ಮಂಗಳವಾರ ಅರ್ಪಿಸಿ ಸಿಂಧೂರ

ಸಾಮಾನ್ಯ ಜೀವನದಲ್ಲಿ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಸಿಂಧೂರಕ್ಕೆ ಮಹತ್ವದ ಸ್ಥಾನವಿದೆ. ಸಿಂಧೂರ ಸಾಮಾನ್ಯವಾಗಿ ಕಿತ್ತಳೆ ಬಣ್ಣದಲ್ಲಿರುತ್ತದೆ. ಮಹಿಳೆಯರು ಸೌಭಾಗ್ಯದ ಸಂಕೇತವಾಗಿ ಹಾಗೂ ಅದೃಷ್ಟದ ಸಂಕೇತವಾಗಿ ಇದನ್ನು ಬಳಸ್ತಾರೆ. ಸಿಂಧೂರವಿಲ್ಲದೆ ವಿವಾಹ ಪೂರ್ತಿಯಾಗುವುದಿಲ್ಲ. ಸಿಂಧೂರವನ್ನು ಮಂಗಳ ಗ್ರಹಕ್ಕೆ ಹೋಲಿಸಲಾಗಿದೆ. ಹಾಗಾಗಿ ಇದನ್ನು ಮಂಗಳಕಾರಿ ಎನ್ನಲಾಗುತ್ತದೆ.

ಹನುಮಂತನಿಗೆ ಸಿಂಧೂರ ಹಚ್ಚುವುದು ಹಾಗೂ ಲೇಪಿಸುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಸೀತಾ ಮಾತೆಯಿಂದ ಪ್ರೇರೇಪಿತನಾದ ಹನುಮಂತ ಒಮ್ಮೆ ಸಿಂಧೂರ ಹಚ್ಚಿಕೊಂಡಿದ್ದನಂತೆ. ಅಲ್ಲಿಂದ ಆತನಿಗೆ ಸಿಂಧೂರ ಹಚ್ಚುವುದು ಶುಭವೆಂದು ನಂಬಲಾಗಿದೆ.

ಹನುಮಂತನನ್ನು ಪ್ರಸನ್ನಗೊಳಿಸಲು ಮಂಗಳವಾರ ಸಿಂಧೂರವನ್ನು ಅರ್ಪಿಸಬೇಕು.

ಸಮಸ್ಯೆ ಎದುರಾದಲ್ಲಿ ಹನುಮಂತನಿಗೆ ಮಲ್ಲಿಗೆ ಎಣ್ಣೆ ಹಾಗೂ ಸಿಂಧೂರವನ್ನು ಅರ್ಪಿಸಬೇಕು.

ಪುರುಷರು ಹನುಮಂತನಿಗೆ ಸಿಂಧೂರವನ್ನು ಹಚ್ಚಬಹುದು. ಲೇಪನ ಕೂಡ ಮಾಡಬಹುದು.

ಮಹಿಳೆಯರು ಸಿಂಧೂರವನ್ನು ಹನುಮಂತನಿಗೆ ಹಚ್ಚಬಾರದು.

ಯಾವುದಾದ್ರೂ ಒಂದು ಮಂಗಳವಾರ ಹನುಮಂತನ ಚರಣಕ್ಕೆ ಸಿಂಧೂರವನ್ನು ಹಚ್ಚಿ.

ಬಿಳಿ ಕಾಗದದ ಮೇಲೆ ಸಿಂಧೂರದ ಸ್ವಸ್ತಿಕವನ್ನು ರಚಿಸಿ. ಇದನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ. ಇದು ನೌಕರಿ ಸಮಸ್ಯೆಯನ್ನು ದೂರ ಮಾಡುತ್ತದೆ.

ನಿಮ್ಮ ವಯಸ್ಸಿನಷ್ಟು ಅಶ್ವಥ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ರಾಮನ ಹೆಸರನ್ನು ಸಿಂಧೂರದಲ್ಲಿ ಬರೆದು ಹನುಮಂತನ ದೇವಸ್ಥಾನಕ್ಕೆ ಅರ್ಪಿಸಿ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read