ಹಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೆ ಸನ್ಮಾನ

ವ್ಯಕ್ತಿಯೊಬ್ಬರು ತನ್ನ ಆಟೋದಲ್ಲಿ ಮರೆತು ಹೋಗಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೋಮವಾರದಂದು ತಮ್ಮ ಕಚೇರಿಯಲ್ಲಿ ಸನ್ಮಾನಿಸಿದ್ದಾರೆ.

ಆಟೋ ಚಾಲಕ ಜೆಪಿ ನಗರ ನಿವಾಸಿ ಫೈರೋಜ್ ಖಾನ್ ಸನ್ಮಾನಕ್ಕೊಳಗಾದವರಾಗಿದ್ದು, ಏಪ್ರಿಲ್ 30ರಂದು ಬಸವೇಶ್ವರ ನಗರ ನಿವಾಸಿ ಶ್ರೀನಿವಾಸ ಗೌಡರ ಕಾರು ಕೆಟ್ಟು ನಿಂತಿದ್ದ ವೇಳೆ ಅದನ್ನು ತಳ್ಳಿ ಸ್ಟಾರ್ಟ್ ಆಗಲು ಫೈರೋಜ್ ನೆರವಾಗಿದ್ದರು.

ಈ ವೇಳೆ ಶ್ರೀನಿವಾಸಗೌಡ 22 ಸಾವಿರ ರೂಪಾಯಿ ನಗದು, ಎಟಿಎಂ ಕಾರ್ಡ್, ಪಾಸ್ ಬುಕ್ ಮೊದಲಾದ ದಾಖಲೆಗಳಿದ್ದ ಬ್ಯಾಗನ್ನು ಆಟೋದಲ್ಲಿಯೇ ಇಟ್ಟು ಮರೆತಿದ್ದರು. ಇದನ್ನು ಗಮನಿಸಿದ ಫೈರೋಜ್ ಬಳಿಕ ಪೊಲೀಸ್ ಠಾಣೆಗೆ ತಲುಪಿಸಿದ್ದು, ಅದರಲ್ಲಿದ್ದ ದಾಖಲೆಗಳ ಮೇಲೆ ಆಧಾರದ ಮೇಲೆ ಶ್ರೀನಿವಾಸ ಗೌಡರಿಗೆ ಮರಳಿಸಲಾಗಿತ್ತು. ಫೈರೋಜ್ ಪ್ರಾಮಾಣಿಕತೆಯನ್ನು ಮೆಚ್ಚಿ ರಕ್ಷಣಾಧಿಕಾರಿಗಳು ಸೋಮವಾರ ಸನ್ಮಾನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read