ಹಗಲಿನಲ್ಲಿ ನಿದ್ರೆ ಮಾಡುವ ‘ಅಭ್ಯಾಸ’ ನಿಮಗಿದೆಯಾ…..?

ಸೂರ್ಯೋದಯ ಹಾಗೂ ಸೂರ್ಯಾಸ್ತದ ನಡುವಿನ ಸಮಯವನ್ನು ಹಗಲೆಂದು ಪರಿಗಣಿಸಲಾಗಿದೆ. ಹಗಲಿನಲ್ಲಿ ಯಾವ ಕೆಲಸ ಮಾಡಬೇಕು, ಸೂರ್ಯೋದಯದ ವೇಳೆ ಏನು ಮಾಡಬೇಕು, ಸೂರ್ಯಾಸ್ತದ ವೇಳೆ ಏನು ಮಾಡಬಾರದು ಎಂಬುದನ್ನು ಪುರಾಣದಲ್ಲಿ ವಿವರವಾಗಿ ಹೇಳಲಾಗಿದೆ. ಆಯುರ್ವೇದ ಹಾಗೂ ಶಾಸ್ತ್ರದ ಪ್ರಕಾರ ಹಗಲಿನಲ್ಲಿ ನಿದ್ರೆ ಮಾಡಬಾರದು.

ಹಗಲಿನಲ್ಲಿ ನಿದ್ರೆ ಮಾಡುವುದು ನ್ಯಾಯೋಚಿತವಲ್ಲ. ಬೆಳಿಗ್ಗೆ ಬೇಗ ಏಳಬೇಕು. ರಾತ್ರಿ ಬೇಗ ಮಲಗಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ರೋಗಿಗಳನ್ನು ಬಿಟ್ಟು ಉಳಿದವರು ಹಗಲಿನಲ್ಲಿ ನಿದ್ರೆ ಮಾಡುವುದು ಒಳ್ಳೆಯದಲ್ಲ. ಆರೋಗ್ಯದ ಜೊತೆಗೆ ಸುಖ, ಸಮೃದ್ಧಿಯನ್ನು ಇದು ಹಾಳು ಮಾಡುತ್ತದೆ. ಬೆಳಿಗ್ಗೆ ಸೂರ್ಯೋದಯವಾದ ಮೇಲೂ ನಿದ್ರೆ ಮಾಡಿದ್ದಲ್ಲಿ ರೋಗ ಬರುತ್ತದೆ. ರೋಗ ಹಾಗೂ ಶೋಕವಿದ್ದಲ್ಲಿ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ.

ಸಾಮಾನ್ಯವಾಗಿ ಗೃಹಿಣಿಯರು ಹಾಗೂ ರಾತ್ರಿ ಶಿಫ್ಟ್ ಮಾಡುವ ಮಹಿಳೆಯರು ಹಗಲಿನಲ್ಲಿ ಮಲಗುತ್ತಾರೆ. ಇದರ ಜೊತೆಗೆ ರೋಗವನ್ನೂ ಆಹ್ವಾನಿಸುತ್ತಾರೆ. ಹಗಲಿನಲ್ಲಿ ನಿದ್ದೆ ಮಾಡುವುದರಿಂದ ಸೋಮಾರಿತನವೂ ಆವರಿಸುತ್ತದೆ. ಆರ್ಥಿಕ ಹಾಗೂ ಮಾನಸಿಕ ಯಾತನೆ ಅನುಭವಿಸಬೇಕಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read