ಸ್ಕೂಟಿಯಲ್ಲಿ ಹೋಗ್ತಿದ್ದ ಜೋಡಿಯ ಚುಂಬನ; ಪ್ರಶ್ನಿಸಿದ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಹತ್ಯೆ

ಸ್ಕೂಟಿಯಲ್ಲಿ ಹೋಗುತ್ತಾ ಚುಂಬಿಸುತ್ತಿದ್ದ ಜೋಡಿಯನ್ನ ಎಚ್ಚರಿಸಿದ್ದಕ್ಕೆ ಜಿಮ್ ಟ್ರೈನರ್ ನ ಹತ್ಯೆ ಮಾಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.‌

ಸಾಹಿಬಾಬಾದ್‌ ಸಮೀಪದ ವಸತಿ ಪ್ರದೇಶದಲ್ಲಿ ಸ್ಕೂಟಿ ಚಾಲನೆ ಮಾಡುವಾಗ ಜೋಡಿಯೊಂದು ಚುಂಬಿಸುತ್ತಿದ್ದನ್ನ ಪ್ರಶ್ನಿಸಿದ್ದ 27 ವರ್ಷದ ವಿವೇಕ್ ಮಿಶ್ರಾ ಅವರ ಮೇಲೆ ಹಲ್ಲೆಯಾದ 2 ದಿನದ ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಮೃತ ವಿವೇಕ್ ಮಿಶ್ರಾ ಬೆಳಿಗ್ಗೆ ಸಾಹಿಬಾಬಾದ್ ತರಕಾರಿ ಮಾರುಕಟ್ಟೆಯಲ್ಲಿ ಲೆಕ್ಕಪರಿಶೋಧಕರಾಗಿ ಮತ್ತು ಸಂಜೆ ಜಿಮ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರದಂದು ಈ ಘಟನೆ ನಡೆದಿದ್ದು, ಎಲ್.ಆರ್. ಕಾಲೇಜಿನ ಬಳಿಯಿರುವ ಬಯಲು ಪ್ರದೇಶದಲ್ಲಿ ಜೋಡಿಯೊಂದು ಸ್ಕೂಟಿ ಚಾಲನೆ ವೇಳೆಯೇ ಕಿಸ್ ಮಾಡುತ್ತಿದ್ದನ್ನ ವಿವೇಕ್ ಮಿಶ್ರಾ ನೋಡಿದ್ದಾರೆ.

ಇದು ಜನವಸತಿ ಪ್ರದೇಶವಾದ್ದರಿಂದ ಬೇರೆಡೆ ಹೋಗುವಂತೆ ಹೇಳಿದಾಗ ಸ್ಕೂಟಿ ಚಲಾಯಿಸುತ್ತಿದ್ದ ವ್ಯಕ್ತಿಗೆ ಕೋಪ ಬಂದಿದೆ. ಆತ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿವೇಕ್ ಮಿಶ್ರಾನನ್ನ ನಿರ್ದಯವಾಗಿ ಥಳಿಸಿದ್ದಾರೆ ಎಂದು ದೂರು ದಾಖಲಿಸಿರುವ ದಾರಿಹೋಕ ವ್ಯಕ್ತಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

ಮಿಶ್ರಾ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಿಸದೇ ಭಾನುವಾರ ನಿಧನರಾದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಅಡಿಯಲ್ಲಿ ಸಾಹಿಬಾಬಾದ್ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಮನೀಶ್ ಕುಮಾರ್, ಮನೀಶ್ ಯಾದವ್, ಗೌರವ್ ಕಸನಾ, ಆಕಾಶ್ ಕುಮಾರ್, ಪಂಕಜ್ ಸಿಂಗ್ ಮತ್ತು ವಿಪುಲ್ ಕುಮಾರ್ ಎಂದು ಗುರುತಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read