ಸೌಂದರ್ಯ ಸ್ಪರ್ಧೆಯಲ್ಲಿ ಹೆಂಡತಿಗೆ 2ನೇ ಸ್ಥಾನ ಘೋಷಣೆಯಾಗ್ತಿದ್ದಂತೆ ವಿಜೇತರ ಕಿರೀಟ ಕಿತ್ತುಕೊಂಡು ಮುರಿದುಹಾಕಿದ ಪತಿ

ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿಗೆ ಗೆಲುವಿನ ಕಿರೀಟ ಕೈತಪ್ಪಿದ್ದಕ್ಕೆ ಸಿಟ್ಟಿಗೆದ್ದ ಪತಿ ವಿಜೇತರ ಕಿರೀಟವನ್ನ ಕಿತ್ತುಕೊಂಡು ನೆಲಕ್ಕೆ ಹಾಕಿದ ಘಟನೆ ನಡೆದಿದೆ. ಸ್ಪರ್ಧೆಯಲ್ಲಿ ತನ್ನ ಪತ್ನಿಗೆ ಎರಡನೇ ಸ್ಥಾನ ನೀಡಲಾಯಿತೆಂದು ವೇದಿಕೆ ಮೇಲೆ ಹತ್ತಿದ ಪತಿ ವಿಜೇತರ ಕಿರೀಟ ಕಿತ್ತುಕೊಂಡು ಗಲಾಟೆ ಸೃಷ್ಟಿಸಿದರು. ಬ್ರೆಜಿಲ್‌ನಲ್ಲಿ ನಡೆದ LGBTQ+ ಸೌಂದರ್ಯ ಸ್ಪರ್ಧೆಯಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಸುದ್ದಿವಾಹಿನಿ ಗ್ಲೋಬೊ ತಿಳಿಸಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಓರ್ವರು ಘಟನೆಯ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಮಿಸ್ ಗೇ ಮಾಟೊ ಗ್ರೊಸೊ 2023 ಸ್ಪರ್ಧೆಯಲ್ಲಿ ವಿಜೇತರನ್ನು ಘೋಷಿಸುತ್ತಿದ್ದಂತೆಯೇ ವ್ಯಕ್ತಿಯ ಪ್ರಕೋಪ ಸಂಭವಿಸಿದೆ. ಈ ಕ್ಲಿಪ್ ಶೀಘ್ರದಲ್ಲೇ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡಿದೆ.

ಕಿರೀಟಧಾರಣೆ ಸಮಾರಂಭದಲ್ಲಿ ಇಬ್ಬರು ಫೈನಲಿಸ್ಟ್ ಗಳಾದ ನತಲ್ಲಿ ಬೆಕರ್ ಮತ್ತು ಇಮಾನ್ಯುಲಿ ಬೆಲಿನಿ ಅವರು ವೇದಿಕೆ ಮೇಲಿದ್ದರು. ಇಮಾನ್ಯುಲಿ ಅಂತಿಮವಾಗಿ ವಿಜೇತರಾಗಿ ಆಯ್ಕೆಯಾದರು. ಈ ವೇಳೆ ಅವರಿಗೆ ಕಿರೀಟಧಾರಣೆ ಮಾಡಲು ಮಹಿಳೆಯೊಬ್ಬರು ಮುಂದಾಗ್ತಿದ್ದಂತೆ ರನ್ನರ್ ಅಪ್ ಸ್ಥಾನ ಪಡೆದ ಮಹಿಳೆಯ ಪತಿ ಕಿರೀಟ ಕಿತ್ತುಕೊಂಡು ನೆಲಕ್ಕೆ ಹಾಕುತ್ತಾರೆ.

ಸ್ಪರ್ಧೆಯ ಸಂಯೋಜಕರಾದ ಮ್ಯಾಲೋನ್ ಹೇನಿಶ್ ನಂತರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅವರು ಫಲಿತಾಂಶವು ನ್ಯಾಯಯುತವಾಗಿಲ್ಲವೆಂದು ಈ ರೀತಿ ಗಲಾಟೆ ಮಾಡಿ ಹಾನಿಯನ್ನುಂಟು ಮಾಡಿದ್ದಾರೆಂದರು.
ಸ್ಪರ್ಧೆಯ ತೀರ್ಪುಗಾರರು ಬೆಲಿನಿ ಅವರನ್ನು ವಿಜೇತರೆಂದು ಘೋಷಿಸುವಲ್ಲಿ ನ್ಯಾಯಯುತವಾಗಿದೆ ಎಂದು ಸಂಘಟಕರು ಹೇಳಿದ್ದಾರೆ.

https://twitter.com/brunoguzzo/status/1662809530206412800?ref_src=twsrc%5Etfw%7Ctwcamp%5Etweetembed%7Ctwterm%5E1662809530206412800%7Ctwgr%5E034afae73398179539eddc9f86c7cbd5578366d9%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fvideo-enraged-husband-breaks-beauty-pageant-winners-crown-in-brazil-after-wife-comes-second-4078846

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read