ಸೌಂದರ್ಯ ವೃದ್ಧಿಗೆ ಬೇಕು ಕರಿಬೇವು……!

ಒಗ್ಗರಣೆಗೆ ಘಮ ಕೊಡುವ ಕರಿಬೇವಿನಸೊಪ್ಪಿನಲ್ಲಿ ಸೌಂದರ್ಯ ವರ್ಧಕ ಗುಣಗಳೂ ಅಡಗಿವೆ ಎಂಬುದು ನಿಮಗೆ ತಿಳಿದಿದೆಯೇ…? ಅದನ್ನು ಬಳಸುವ ಬಗೆ ಹೇಗೆಂದು ತಿಳಿಯೋಣ.

ಎಣ್ಣೆ ತ್ವಚೆ ಹೊಂದಿರುವವರ ಮುಖದಲ್ಲಿ ಇರುವ ಕಪ್ಪು ಕಲೆಗಳನ್ನು ದೂರಮಾಡಲು ಕರಿಬೇವನ್ನು ಬಳಸಲಾಗುತ್ತದೆ. ಇದು ತ್ವಚೆಯ ಮೇಲೆ ರಂಧ್ರಗಳಾಗದಂತೆ ನೋಡಿಕೊಳ್ಳುತ್ತವೆ. ಮೊಡವೆಗಳನ್ನು ದೂರ ಮಾಡುತ್ತವೆ. ಕಣ್ಣಿನ ಕೆಳಭಾಗ ಕಪ್ಪಾಗಿರುವುದನ್ನು ಸರಿಮಾಡಿ ನಿಮ್ಮ ತ್ವಚೆಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಇದರ ಹಸಿ ಸೊಪ್ಪಿನ ರಸವನ್ನು ಜಜ್ಜಿ ಅಥವಾ ರುಬ್ಬಿ ಮುಖಕ್ಕೆ ಹಚ್ಚಿಕೊಂಡರೆ ಸಾಕು, ಮಳಿಗೆಗಳಿಂದ ತರುವ ಕ್ರೀಮ್ ನ ಅವಶ್ಯಕತೆಯೇ ಬರುವುದಿಲ್ಲ. ಏಕೆಂದರೆ ಬೇವಿನ ಸೊಪ್ಪಿನಲ್ಲಿ ಆಂಟಿ ಸೆಪ್ಟಿಕ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣವಿದ್ದು. ಇದು ಮೊಡವೆಗಳನ್ನು ಬಹುಬೇಗ ದೂರ ಮಾಡುತ್ತದೆ.

ಮುಖದ ಮೇಲಿನ ಸಿಪ್ಪೆ ಏಳುವುದಕ್ಕೂ, ಗುಳ್ಳೆಗಳಾಗುವುದು ನಿಲ್ಲುವುದಕ್ಕೂ ಇದು ಹೇಳಿ ಮಾಡಿಸಿದ ಔಷಧ. ಹಾಗಾದರೆ ತಡ ಯಾಕೆ, ಇಂದೇ ನಿಮ್ಮ ಮನೆ ಹಿತ್ತಲಲ್ಲಿರುವ ಕರಿಬೇವಿನ ಸೊಪ್ಪಿನ ರಸವನ್ನು ಹಿಂಡಿ ಮದ್ದು ತಯಾರಿಸಿ ಹಚ್ಚಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read