ಸೂರು ಕಟ್ಟಿಕೊಳ್ಳಿ ಅಂತ ಹಣ ಕೊಟ್ರೆ ಲವರ್ಸ್‌ ಜೊತೆ ವಿವಾಹಿತ ಮಹಿಳೆಯರು ಎಸ್ಕೇಪ್….!

Home Finance: Spouse can't get Pradhan Mantri Awas Yojana subsidy if you have taken the subsidy earlier | The Financial Expressಬಾರಾಬಂಕಿ: ಪ್ರಧಾನಮಂತ್ರಿ ನಗರ ವಸತಿ ಯೋಜನೆಯಲ್ಲಿ ಬಡವರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಮೊದಲ ಹಂತವಾಗಿ 50 ಸಾವಿರ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಯೋಜನೆಯಡಿ ಉತ್ತರ ಪ್ರದೇಶದಲ್ಲಿ ಒಂದಿಷ್ಟು ಫಲಾನುಭವಿಗಳನ್ನು ಗುರುತಿಸಿ ಮನೆ ನೀಡಲಾಗಿದೆ. ಇದರ ಭಾಗವಾಗಿ ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿದೆ.

ಹಣ ಬಿಡುಗಡೆ ಆದ ತಕ್ಷಣ ಕೆಲ ಮಹಿಳೆಯರು ಗಂಡನನ್ನ ಬಿಟ್ಟು ಲವರ್ ಗಳ ಜೊತೆ ಪರಾರಿಯಾಗಿದ್ದಾರಂತೆ. ಉತ್ತರ ಪ್ರದೇಶದ ಸತ್ರಿಖ್, ಜೈನ್‌ಪುರ, ಬಂಕಿ, ಫತೇಪುರ್ ಮತ್ತು ಬೆಲ್ಲಾರ ನಗರ ಪಂಚಾಯತ್‌ಗಳಲ್ಲಿ ಈ ರೀತಿಯ ಐದು ಪ್ರಕರಣಗಳು ಆಗಿವೆ.

ಈ ಎಲ್ಲಾ ನಗರ ಪಂಚಾಯ್ತಿಗಳ 5 ಫಲಾನುಭವಿಗಳ ಪತ್ನಿಯರು ಮೊದಲ ಕಂತಿನ 50 ಸಾವಿರ ಹಣ ಪಡೆದು ತಮ್ಮ-ತಮ್ಮ ಪ್ರೇಮಿಗಳೊಂದಿಗೆ ಪರಾರಿಯಾಗಿದ್ದಾರಂತೆ. ಇನ್ನು ಎರಡನೇ ಕಂತಿನ ಹಣ ಬಿಡುಗಡೆ ಆದರೆ ಹೇಗೆ ಅನ್ನೋ ಚಿಂತೆ ಇದೀಗ ಗಂಡಂದಿರನ್ನು ಕಾಡ್ತಾ ಇದೆ.

ಇನ್ನು ಈ ಮಹಿಳೆಯರಿಂದ ಅವರವರ ಗಂಡಂದಿರು ಸಮಸ್ಯೆ ಎದುರಿಸುವಂತಾಗಿದೆ. ನಿರ್ಮಾಣ ಕಾಮಗಾರಿ ಆರಂಭವಾಗದ ಕಾರಣ ಜಿಲ್ಲಾ ನಗರಾಭಿವೃದ್ಧಿ ಸಂಸ್ಥೆ ಅವರಿಗೆ ನೋಟಿಸ್ ಕಳುಹಿಸಿದೆ. ಬೇರೆ ಇಲಾಖೆಯಿಂದ ಹಣ ವಸೂಲಿಯಾಗುವ ಆತಂಕ ಇದೆ. ಹೀಗೆ ಎರಡೆರಡು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಎರಡನೇ ಕಂತಿನ ಹಣವನ್ನು ನೀಡದಂತೆ ಪಿಒಗೆ ನೊಂದ ಪತಿಯಂದಿರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read