ಸೂಪರ್‌ ಹಿಟ್‌ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಈ ಖಾನ್‌ ದ್ವಯರು 29 ವರ್ಷಗಳಿಂದ ದೂರವಾಗಿರುವುದೇಕೆ ? ಶೂಟಿಂಗ್‌ ವೇಳೆ ನಡೆದಿತ್ತು ಆ ಘಟನೆ…!

ಸಲ್ಮಾನ್‌ ಖಾನ್‌ ಹಾಗೂ ಅಮೀರ್‌ ಖಾನ್‌ ಇಬ್ಬರೂ ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳು. ಸುಮಾರು 3 ದಶಕಗಳ ಹಿಂದೆ ಜೊತೆಯಾಗಿ ನಟಿಸಿದ್ದ ಖಾನ್‌ದ್ವಯರು ನಂತರ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಸಲ್ಮಾನ್ ಮತ್ತು ಅಮೀರ್ 29 ವರ್ಷಗಳ ಹಿಂದೆ ‘ಅಂದಾಜ್ ಅಪ್ನಾ ಅಪ್ನಾ’ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಈ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.

ಅಂದಾಜ್‌ ಅಪ್ನಾ ಅಪ್ನಾ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಆದರೆ ಈ ಚಿತ್ರದ ನಂತರ ಸಲ್ಮಾನ್ ಮತ್ತು ಅಮೀರ್ ಒಟ್ಟಿಗೆ ಕೆಲಸ ಮಾಡಲೇ ಇಲ್ಲ. ಇದರ ಹಿಂದಿನ ಕಾರಣ ಏನು ಗೊತ್ತಾ?  ಅಂದಾಜ್‌ ಅಪ್ನಾ ಅಪ್ನಾ ಚಿತ್ರದ ಶೂಟಿಂಗ್ ಸಮಯದಲ್ಲಿ ಸಲ್ಮಾನ್ ಖಾನ್ ಯಾವಾಗಲೂ ಟೆನ್ಷನ್‌ನಲ್ಲಿರುತ್ತಿದ್ದರಂತೆ. ಅಷ್ಟೇ ಅಲ್ಲ  ಶೂಟಿಂಗ್ಗೆ ಗಂಟೆಗಟ್ಟಲೆ ತಡವಾಗಿ ಬರುತ್ತಿದ್ದರು. ಸಲ್ಮಾನ್‌ಗಾಗಿ ಕಾದು ಕಾದು ಅಮೀರ್‌ ಖಾನ್‌ ಸುಸ್ತಾಗುತ್ತಿದ್ದರು.

ಸಲ್ಮಾನ್ ಖಾನ್ ಪ್ರತಿದಿನ ಸೆಟ್‌ಗೆ ತಡವಾಗಿ ಬರುವುದರಿಂದ ಅಮೀರ್ ಖಾನ್ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಇದೇ ಕಾರಣಕ್ಕೆ ಇನ್ಮುಂದೆ ಸಲ್ಲು ಜೊತೆ ನಟಿಸಲೇಬಾರದೆಂದು ಅಮೀರ್‌ ನಿರ್ಧರಿಸಿಬಿಟ್ಟಿದ್ದರು.  ಇಷ್ಟೇ ಅಲ್ಲ ಚಿತ್ರದ ನಾಯಕಿಯರಾದ ರವೀನಾ ಮತ್ತು ಕರಿಷ್ಮಾ ನಡುವೆಯೂ ಮನಸ್ತಾಪ ಉಂಟಾಗಿತ್ತು. ಇಬ್ಬರೂ ಸೆಟ್‌ನಲ್ಲಿ ಪರಸ್ಪರ ಮಾತನಾಡುವುದನ್ನು ನಿಲ್ಲಿಸಿದರು. ಈ ವಿಷಯವನ್ನು ಸ್ವತಃ ರವೀನಾ ಟಂಡನ್ ಬಹಿರಂಗಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read