ಸುಲಭವಾಗಿ ಮಾಡಿ ಸವಿಯಿರಿ ಸಿಹಿಯಾದ ʼಬಾದಾಮಿʼ ಹಲ್ವಾ

ಬಾದಾಮಿ ನಾಲಿಗೆಗೆ ರುಚಿ. ದೇಹಕ್ಕೂ ಹಿತ. ಬಾದಾಮಿಯಿಂದ ತಯಾರಿಸುವ ಪ್ರತಿ ಖಾದ್ಯ ಸವಿ ಸವಿಯಾಗಿರುತ್ತದೆ. ಅದರಲ್ಲಿ ಬಾದಾಮಿ ಹಲ್ವಾ ಕೂಡ ಒಂದು.

ಮತ್ತೆ ಮತ್ತೆ ತಿನ್ನಬೇಕೆನಿಸುವ ಈ ಸಿಹಿಯನ್ನು ಸುಲಭ ಹಾಗೂ ಸರಳ ವಿಧಾನದಿಂದ ತಯಾರಿಸಬಹುದು. ಸಿಂಪಲ್ ಬಾದಾಮಿ ಹಲ್ವಾ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

ಬಾದಾಮಿ – 1 ಕಪ್
ಸಕ್ಕರೆ – 1/2 ಕಪ್
ನೀರು – 5,1/2 ಕಪ್
ತುಪ್ಪ – 1/2 ಕಪ್
ಕೇಸರಿ ಎಳೆ – 7 ರಿಂದ 8

ಮಾಡುವ ವಿಧಾನ

ಒಂದು ಪಾತ್ರೆಗೆ 4 ಕಪ್ ನೀರನ್ನು ಸೇರಿಸಿ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಬಾದಾಮಿಯನ್ನು ಸೇರಿಸಿ 10 ನಿಮಿಷಗಳ ಕಾಲ ಬೇಯಿಸಿ. ಬಾದಾಮಿ ಬೆಂದ ನಂತರ ಒಂದು ಬೌಲ್‍ ಗೆ ವರ್ಗಾಯಿಸಿ ತಣ್ಣಗಾದ ಮೇಲೆ ಸಿಪ್ಪೆ ತೆಗೆದು ಮಿಕ್ಸರ್ ಜಾರ್ ನಲ್ಲಿ ಬಾದಾಮಿಯನ್ನು ಮೃದುವಾಗಿ ರುಬ್ಬಿಕೊಳ್ಳಿ.

ಇನ್ನೊಂದು ಪಾತ್ರೆಯಲ್ಲಿ ಕಾಲು ಕಪ್ ನೀರನ್ನು ಬಿಸಿ ಮಾಡಿ. ಅದಕ್ಕೆ ಸಕ್ಕರೆಯನ್ನು ಸೇರಿಸಿ ಪಾಕ ಬರಲು ಬಿಡಬೇಕು. ಬಳಿಕ ಕೇಸರಿ ಎಳೆಯನ್ನು ಸೇರಿಸಿ ಕೆಲವು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಯಲು ಬಿಡಿ.

ಇನ್ನೊಂದು ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಕರಗಿದ ಮೇಲೆ ರುಬ್ಬಿಕೊಂಡ ಬಾದಾಮಿ ಪೇಸ್ಟ್ ಅನ್ನು ಸೇರಿಸಿ. 8-10 ನಿಮಿಷಗಳ ಕಾಲ ನಿರಂತರವಾಗಿ ತಿರುವುತ್ತಲೇ ಇರಬೇಕು. ಒಮ್ಮೆ ಸ್ಥಿರತೆಗೆ ಬಂದ ಮೇಲೆ ಸಕ್ಕರೆ ಪಾಕವನ್ನು ಸೇರಿಸಿ. ತುಪ್ಪವು ಬೇರ್ಪಡುವವರೆಗೆ ಚೆನ್ನಾಗಿ ಮಿಶ್ರಗೊಳಿಸಿ.

ಹಲ್ವಾ ಸಿದ್ಧವಾದ ನಂತರ ಸಾಮಾನ್ಯ ತಾಪಮಾನಕ್ಕೆ ತಿರುಗಿದ ಮೇಲೆ ಫ್ರಿಡ್ಜ್ ನಲ್ಲಿಟ್ಟು ತಣ್ಣಗಾಗಿಸಿ ಸವಿಯಲು ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read