‘ಸುಖ-ಸಮೃದ್ಧಿ’ ಪ್ರಾಪ್ತಿಗಾಗಿ ಶುಕ್ರನನ್ನು ಹೀಗೆ ಒಲಿಸಿಕೊಳ್ಳಿ

ನಿಮ್ಮ ಜಾತಕದಲ್ಲಿ ಶುಕ್ರಗ್ರಹ ದುರ್ಬಲವಾಗಿದ್ದರೆ ಅಂದುಕೊಂಡ ಯಾವ ಕೆಲಸವೂ ಆಗುವುದಿಲ್ಲ. ಎಷ್ಟು ಕಷ್ಟಪಟ್ರೂ ಸುಖ-ಸಮೃದ್ಧಿ ನಿಮ್ಮ ಕೈಗೆಟುಕುವುದಿಲ್ಲ. ಸೌಭಾಗ್ಯ, ಐಶ್ವರ್ಯ ಎಲ್ಲವೂ ಇರಬೇಕು ಅಂದ್ರೆ ಶುಕ್ರನ ಕೃಪೆ ಇರಲೇಬೇಕು.

ಹಾಗಾಗಿ ಶುಕ್ರನ ಕೃಪಾಕಟಾಕ್ಷವನ್ನು ಪಡೆಯಲು ಈ 5 ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ. ಕೈಬೆರಳುಗಳಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಿ. ನಿಮ್ಮ ಡಯಟ್ ನಲ್ಲಿ ಸಾಬೂದಾನವನ್ನೂ ಸೇರಿಸಿಕೊಳ್ಳಿ. ಸಾಬೂದಾನ ಖಿಚಡಿ, ಪಾಯಸ ಸೇವಿಸಬಹುದು.

ಹಾಲಿನ ಪದಾರ್ಥ ಸೇವಿಸುವುದರಿಂದ್ಲೂ ಶುಕ್ರ ಬಲಾಢ್ಯನಾಗುತ್ತಾನೆ. ಪ್ರತಿ ದಿನ ಪ್ರಶಾಂತವಾದ ಸಂಗೀತವನ್ನು ಆಲಿಸಿ. ಕೊಳಲು, ಸಿತಾರ್ ವಾದ್ಯಗಳನ್ನು ಕೇಳುವುದರಿಂದ ಶುಕ್ರನ ಕೃಪೆ ನಿಮ್ಮ ಮೇಲಿರುತ್ತದೆ.

ಕಿವಿಗಡಚಿಕ್ಕುವಂತಹ ಅಬ್ಬರದ ಸಂಗೀತವನ್ನು ಕೇಳಬೇಡಿ. ಶುಕ್ರನನ್ನು ಒಲಿಸಿಕೊಳ್ಳಲು ಇನ್ನೂ ಒಂದು ಉಪಾಯವಿದೆ. ಪ್ರತಿ ಶುಕ್ರವಾರ ಉಪ್ಪು ಸೇವಿಸಬೇಡಿ. ಪತಿ-ಪತ್ನಿ ಪರಸ್ಪರರನ್ನು ಗೌರವಿಸಿ, ಆಧರಿಸಿ. ಸಂಗಾತಿಯ ಜೊತೆಗೆ ಸಮಯ ಕಳೆಯಿರಿ. ಇದರಿಂದ ಶುಕ್ರ ಪ್ರಸನ್ನನಾಗುತ್ತಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read