ಸುಖ ನಿದ್ರೆಗಾಗಿ ಮಲಗುವ ಮುನ್ನ ದಿಂಬಿನ ಕೆಳಗಿರಲಿ ಈ ವಸ್ತು

ಸುಖ ನಿದ್ರೆ ಎಲ್ಲರಿಗೂ ಒಲಿಯುವಂತಹದ್ದಲ್ಲ. ರಾತ್ರಿ ಪೂರ್ತಿ ಸುಖವಾಗಿ ನಿದ್ದೆ ಮಾಡುವುದು ಒಂದು ವರ ಎಂದ್ರೆ ತಪ್ಪಾಗಲಾರದು.

ಕೆಲವರು ನಿದ್ದೆ ಮಾತ್ರೆ ಸೇವಿಸ್ತಾರೆ. ಒಳ್ಳೆಯ ನಿದ್ದೆ ಬಂದಲ್ಲಿ ಮಾತ್ರ ಬೆಳಗಿನ ಕೆಲಸವನ್ನು ಖುಷಿ ಖುಷಿಯಾಗಿ ಮಾಡಲು ಸಾಧ್ಯ.

ಸಂತೆಯಲ್ಲಿಯೂ ನಿದ್ದೆ ಮಾಡುವವರಿದ್ದಾರೆ. ಹಾಗೆ ಕೆಲವರಿಗೆ ಆರಾಮ ನೀಡುವ ಬೆಡ್ ಬೇಕು. ನಿದ್ದೆ ಬರುವುದೊಂದೇ ಮುಖ್ಯವಲ್ಲ, ಆರೋಗ್ಯ ಹಾಗೂ ಆರ್ಥಿಕ ಸ್ಥಿತಿ ಮೇಲೆ ಈ ನಿದ್ದೆಯ ಪ್ರಭಾವವಿದೆ. ಹಾಸಿಗೆ ಬಳಿ ಕೆಲ ವಸ್ತುಗಳನ್ನಿಟ್ಟು ಮಲಗಿದ್ರೆ ಯಾವೆಲ್ಲ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಈ ಹಿಂದೆಯೇ ಹೇಳಿದ್ದೇವೆ. ಈಗ ಹಾಸಿಗೆ ಬಳಿ ಯಾವ ವಸ್ತುಗಳನ್ನಿಟ್ಟು ಮಲಗಿದ್ರೆ ಏನೇನು ಉಪಯೋಗ ಎಂಬುದನ್ನು ಹೇಳುತ್ತೇವೆ.

ಪರೀಕ್ಷೆಯ ಭಯ ದೂರ ಮಾಡಲು ಪ್ರತಿದಿನ ದೇವಿ ಸರಸ್ವತಿಗೆ ದೀಪ ಹಚ್ಚಿ. ಹಾಗೇ ಮಲಗುವಾಗ ಹಾಸಿಗೆಯ ಬಳಿ ಪುಸ್ತಕವನ್ನಿರಿಸುವುದರಿಂದ ಸಫಲತೆ ಸಿಗುತ್ತದೆ.

ಕೆಟ್ಟ ಸ್ವಪ್ನ ಬೀಳುತ್ತಿದ್ದರೆ ಮಲಗುವ ಮುನ್ನ ಹನುಮಾನ್ ಚಾಲೀಸ್ ಅಥವಾ ಸುಂದರ್ ಖಾಂಡ್ ಪಠಣ ಮಾಡಿ ಮಲಗಿರಿ. ಆ ಪುಸ್ತಕ ನಿಮ್ಮ ತಲೆ ದಿಂಬಿನ ಕೆಳಗಿರಲಿ. ಇದರಿಂದ ಒತ್ತಡ ಹಾಗೂ ಭಯ ಕಡಿಮೆಯಾಗುತ್ತದೆ.

ಹಾಸಿಗೆಯ ಬಳಿ ಕಬ್ಬಿಣದ ವಸ್ತುವನ್ನಿಟ್ಟು ಮಲಗುವುದರಿಂದ ನಕಾರಾತ್ಮಕ ಶಕ್ತಿ ಹತ್ತಿರ ಸುಳಿಯುವುದಿಲ್ಲ.

ಮಾನಸಿಕ ಒತ್ತಡಕ್ಕೊಳಗಾಗಿದ್ದರೆ ಹಾಸಿಗೆ ಬಳಿ ಮೂಲಂಗಿ ಇಟ್ಟು ಮಲಗಿರಿ. ಬೆಳಗ್ಗೆ ಆ ಮೂಲಂಗಿಯನ್ನು ಶಿವನ ದೇವಸ್ಥಾನಕ್ಕೆ ಅರ್ಪಿಸಿ.

ದಿಂಬಿನ ಕೆಳಗೆ ದೇವರಿಗೆ ಅರ್ಪಿಸಿದ ಹೂವನ್ನಿಟ್ಟು ಮಲಗುವುದರಿಂದ ಸುಖ ನಿದ್ರೆ ಬರುತ್ತದೆ.

ಬೆಳ್ಳುಳ್ಳಿ ಅದೃಷ್ಟದ ಸಂಕೇತ. ಹಾಗಾಗಿ ಮಲಗುವ ವೇಳೆ ಜೇಬಿನಲ್ಲಿ ಅಥವಾ ದಿಂಬಿನ  ಬಳಿ ಬೆಳ್ಳುಳ್ಳಿ ಇಟ್ಟು ಮಲಗುವುದರಿಂದ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read