ಸಿನೆಮಾ ಪ್ರದರ್ಶನದ ವೇಳೆ ನಟಿಯ ಗೌನ್‌ ಎಳೆದಿದ್ದ ಹುಚ್ಚು ಅಭಿಮಾನಿ; ಅಲ್ಲಿ ನಡೀತು ಇಂಥಾ ಶಾಕಿಂಗ್‌ ಘಟನೆ…..!

70-80ರ ದಶಕದಲ್ಲಿ ಹಿಂದಿ ಸಿನಿ ಜಗತ್ತಿನ ಜನಪ್ರಿಯ ನಟಿ ಬಿಂದಿಯಾ ಗೋಸ್ವಾಮಿ. ‘ಗೋಲ್ಮಾಲ್’ ಚಿತ್ರದ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದರು. ಬಿಂದಿಯಾ ಗೋಸ್ವಾಮಿ 14ನೇ ವಯಸ್ಸಿನಲ್ಲಿ ಸ್ಟಾರ್‌ಡಮ್ ಗಳಿಸಿದ್ದ ನಟಿ. ಆದರೆ ತಾವು ಅಭಿನಯಿಸಿರೋ ಸಿನೆಮಾದ ಮೊದಲ ಪ್ರದರ್ಶನಕ್ಕೆ ತೆರಳಿದ್ದಾಗ ಯಾರೂ ಊಹಿಸದಂತಹ ಘಟನೆಯೊಂದು ಅವರ ಬದುಕಿನಲ್ಲಿ ನಡೆದುಹೋಯ್ತು. ಈ ವಿಚಾರವನ್ನು ಖುದ್ದು ಬಿಂದಿಯಾ, ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅದು 1980ರ ಸಮಯ.

‘ಟಕ್ಕರ್’ ಚಿತ್ರದ ಪ್ರಥಮ ಪ್ರದರ್ಶನಕ್ಕಾಗಿ ಬಿಂದಿಯಾ ಕೋಲ್ಕತ್ತಾಗೆ ಬಂದಿದ್ದರು. ನಟಿಯನ್ನು ನೋಡಲು ಸಾವಿರಾರು ಜನರು ಅಲ್ಲಿ ಕಿಕ್ಕಿರಿದು ತುಂಬಿದ್ದರು. ಈವೆಂಟ್‌ಗಾಗಿ ವೆಲ್ವೆಟ್ ಗೌನ್ ಧರಿಸಿ ಬಂದಿದ್ದ ನಟಿ ಬಿಂದಿಯಾ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಜನಸಂದಣಿಯಲ್ಲಿ ಯಾರೋ ಹಿಂದಿನಿಂದ ಬಿಂದಿಯಾರ ಗೌನ್‌ ಎಳೆದುಬಿಟ್ಟಿದ್ದಾರೆ. ಗೌನ್‌ ಹಿಂಬಂದಿಯಿಂದ ಪೂರ್ತಿ ಹರಿದು ಹೋಗಿತ್ತು. ನಟಿಯ ಬೆನ್ನು ಬೆತ್ತಲಾಗಿ ಗೋಚರಿಸಿತ್ತು. ಈ ಘಟನೆಯಿಂದ ಬಿಂದಿಯಾ ಆಘಾತಕ್ಕೊಳಗಾಗಿದ್ದರಂತೆ.

ಬಿಂದಿಯಾ ಗೋಸ್ವಾಮಿ ಹುಚ್ಚು ಅಭಿಮಾನಿಯೊಬ್ಬನ ಬಗ್ಗೆ ಹೇಳಿಕೊಂಡಿದ್ದಾರೆ. ಆತ ನಟಿಗೆ ಪ್ರತಿದಿನ ಪತ್ರ ಬರೆಯುತ್ತಿದ್ದ. ನನ್ನನ್ನು ಮದುವೆಯಾಗದಿದ್ದರೆ ನಿನ್ನ ಬಾಗಿಲಿನ ಹೊರಗೆ ಸಾಯುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದ. ಇದರಿಂದ ಬಿಂದಿಯಾ ಆತಂಕಕ್ಕೊಳಗಾಗಿದ್ದರಂತೆ. ಕೊನೆಗೂ ಆ ಅತಿರೇಕದ ಅಭಿಮಾನಿ ಸಿಕ್ಕಿಬಿದ್ದಿದ್ದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read