ಸಿಎಂ ಮಮತಾ ಬ್ಯಾನರ್ಜಿ ನಿವಾಸಕ್ಕೆ ನಟ ಸಲ್ಮಾನ್ ಖಾನ್ ಭೇಟಿ; ಕುತೂಹಲ ಮೂಡಿಸಿದ ಮಾತುಕತೆ

Watch: Salman Khan meets Mamata Banerjee in Kolkata | Kolkata - Hindustan Timesಬಾಲಿವುಡ್ ನಟ ಸಲ್ಮಾನ್ ಖಾನ್ ಶನಿವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದರು. ಕೊಲ್ಕತ್ತಾದ ಕಾಲಿಘಾಟ್‌ನಲ್ಲಿರುವ ದೀದಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಸಲ್ಮಾನ್ ಖಾನ್ ಸಂಜೆ 4.25 ರ ಸುಮಾರಿಗೆ ಟಿಎಂಸಿ ಮುಖ್ಯಸ್ಥೆ ನಿವಾಸವನ್ನು ತಲುಪಿದರು. ಈ ವೇಳೆ ನಟ ಸಲ್ಮಾನ್ ಖಾನ್ ರನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಮಮತಾ ಬ್ಯಾನರ್ಜಿ ನಿವಾಸದಲ್ಲಿ ಸುಮಾರು 30 ನಿಮಿಷಗಳ ಕಾಲ ಸಲ್ಮಾನ್ ಖಾನ್ ಉಪಸ್ಥಿತರಿದ್ದರು. ಶನಿವಾರ ಸಂಜೆ ನಂತರ ನಡೆಯಲಿರುವ ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್‌ನ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲು ನಟ ಸಲ್ಮಾನ್ ಖಾನ್ ಕೊಲ್ಕತ್ತಾಗೆ ಭೇಟಿ ನೀಡಿದ್ದಾರೆ.

ಸಲ್ಮಾನ್ ಖಾನ್ ಗೆ ಈಗಾಗಲೇ ಜೀವ ಬೆದರಿಕೆ ಇರುವುದರಿಂದ ಅವರು ತಂಗಲಿರುವ ಹೊಟೇಲ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

https://twitter.com/ANI/status/1657339930283249667?ref_src=twsrc%5Etfw%7Ctwcamp%5Etweetembed%7Ctwterm%5E1657339930283249667%7Ctwgr%5E9c6e42a45c4c459d491d4fececd5265301e24db1%7Ctwcon%5Es1_&ref_url=https%3A%2F%2Fwww.ndtv.com%2Findia-news%2Fsalman-khan-visits-mamatas-residence-in-kolkata-4031625

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read