ಸಿಎಂ ಬೊಮ್ಮಾಯಿ ವಿರುದ್ಧ ಕಿಡಿಕಾರಿದ ನೆಹರೂ ಓಲೇಕಾರ್: ಜೆಡಿಎಸ್‌ನಿಂದ ಬುಲಾವ್; ಬಿಜೆಪಿಗೆ ರಾಜೀನಾಮೆ

ಒಂದು ಕಡೆ ವಿಧಾನಸಭಾ ಚುನಾವಣೆ ಕಾವು ಕ್ಷಣ ಕ್ಷಣಕ್ಕೂ ಏರ್ತಾ ಹೋಗ್ತಿದೆ. ಇನ್ನೊಂದು ಕಡೆ ಪಕ್ಷಗಳಲ್ಲಿ ಬಂಡಾಯದ ಬೆಂಕಿಯ ಧಗಧಗನೆ ಹೊತ್ತಿ ಉರಿಯುತ್ತಿದೆ. ಅದರ ನಡುವೆಯೇ ಈಗ ರಾಜೀನಾಮೆಯ ಪರ್ವ ಆರಂಭವಾಗಿದೆ.

ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳಲ್ಲೆಲ್ಲ ಅಭ್ಯರ್ಥಿಗಳು ಬಂಡಾಯ ಎದ್ದಿದ್ದಾಗಿದೆ. ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಬಿಜೆಪಿಗೆ ರಾಜೀನಾಮೆ ಘೋಷಣೆ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕ ನೆಹರೂ ಓಲೇಕಾರ್‌ಸಹ ಬೆಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆಹರೂ ಓಲೇಕಾರ್, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಸುಮಾರು 1000 ಬೆಂಬಲಿಗರು ಕಾರ್ಯಕರ್ತರು ನನ್ನ ಜೊತೆ ರಾಜೀನಾಮೆ ನೀಡುತ್ತಾರೆ. ಜೆಡಿಎಸ್ ನಿಂದ ಬುಲಾವ್ ಬಂದಿದೆ. ಕಾರ್ಯಕರ್ತರ ನಿರ್ಣಯ ನೋಡಿ ತೀರ್ಮಾನಿಸುತ್ತೇನೆ ಎಂದು ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ 40% ಕಮಿಷನ್ ಏಜೆಂಟ್. ಬೊಮ್ಮಾಯಿಂದ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಿದೆ. ತನಗೆ ಅನುಕೂಲ ಆಗುವವರಿಗೆ ಟಿಕೆಟ್ ಕೊಡಿಸಿದ್ದಾನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read