ಸಸ್ಯಾಹಾರಿಗಳಿಗೆ ಬೇಡ ಟೆನ್ಷನ್‌, ಮೊಟ್ಟೆಗಿಂತಲೂ ಅಧಿಕ ಪ್ರೋಟೀನ್‌ ಇವುಗಳಲ್ಲಿದೆ…!

ದೇಹಕ್ಕೆ ಪ್ರೋಟೀನ್ ಬಹಳ ಮುಖ್ಯ. ಪ್ರೋಟೀನ್‌ ಕೊರತೆಯಿದ್ದಲ್ಲಿ ಅನೇಕ ಕಾಯಿಲೆಗಳು ಬರುತ್ತವೆ. ಪ್ರೋಟೀನ್ ಎಂದಾಕ್ಷಣ ಮಾಂಸ ಮತ್ತು ಮೊಟ್ಟೆಯನ್ನು ಸೇವಿಸಬೇಕೆಂದು ಜನರು ಭಾವಿಸುತ್ತಾರೆ. ಆದರೆ ಸಸ್ಯಾಹಾರಿಗಳಿಗೆ ಕೂಡ ಸಾಕಷ್ಟು ಪ್ರೋಟೀನ್‌ನ ಮೂಲಗಳಿವೆ. ಮೊಟ್ಟೆಗಿಂತ ಹೆಚ್ಚು ಪ್ರೋಟೀನ್ ಹೊಂದಿರುವ ತರಕಾರಿಗಳಿವೆ.

ಹೂಕೋಸು – ಹೂಕೋಸು ಹೆಚ್ಚಿನ ಪ್ರೋಟೀನ್ ಹೊಂದಿರುವ ಹಸಿರು ತರಕಾರಿ. ಮೊಟ್ಟೆಗಳಿಗಿಂತ ಹೆಚ್ಚು ಪ್ರೋಟೀನ್ ಹೂಕೋಸಿನಲ್ಲಿದೆ. ಹೂಕೋಸಿನ ವಿಶೇಷತೆ ಎಂದರೆ ಅದರಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ತುಂಬಾ ಕಡಿಮೆ. ಇದು ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಹೂಕೋಸಿನಲ್ಲಿ ಫೋಲೇಟ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ ಸಮೃದ್ಧವಾಗಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಹಸಿರು ಬಟಾಣಿ- ಹಸಿರು ಬಟಾಣಿಯಲ್ಲಿ ಸಾಕಷ್ಟು ಪ್ರೋಟೀನ್ ಇರುತ್ತದೆ. ಇದು ದೇಹದಲ್ಲಿನ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮೆಗ್ನೀಸಿಯಮ್, ಕಬ್ಬಿಣ ಮತ್ತು ಮ್ಯಾಂಗನೀಸ್‌ನಂತಹ ಅಂಶಗಳು ಹಸಿರು ಬಟಾಣಿಗಳಲ್ಲಿ ಕಂಡುಬರುತ್ತವೆ. ಇದು ಕೂಡ ಅನೇಕ ರೋಗಗಳನ್ನು ತಡೆಗಟ್ಟಬಲ್ಲದು.

ಸೊಪ್ಪು- ಪಾಲಕ್‌ ಸೊಪ್ಪಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಪ್ರೋಟೀನ್ ಇರುತ್ತದೆ. ಪಾಲಕ್ ಸೊಪ್ಪಿನಲ್ಲಿ ಅಮೈನೋ ಆಮ್ಲವಿದ್ದು, ಇದು ಅನೇಕ ಕಾಯಿಲೆಗಳನ್ನು ದೂರ ಮಾಡುತ್ತದೆ. ಪ್ರತಿದಿನ ಪಾಲಕ್‌ ಸೊಪ್ಪನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೃಷ್ಟಿಶಕ್ತಿ ಕೂಡ ಹೆಚ್ಚುತ್ತದೆ.

ಮೊಳಕೆ ಕಾಳು: ಮೊಳಕೆ ಕಾಳುಗಳು ಫೈಬರ್‌ನ ಉಗ್ರಾಣ ಎಂದರೂ ತಪ್ಪೇನಿಲ್ಲ. ಇವುಗಳಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ಅನೇಕ ರೋಗಗಳಿಂದ ನಮ್ಮನ್ನು ದೂರವಿಡಲು ಮೊಳಕೆ ಕಾಳುಗಳು ಸಹಕಾರಿ. ಮೊಳಕೆ ಕಾಳುಗಳಲ್ಲಿ ಸಾಕಷ್ಟು ಪ್ರೊಟೀನ್ ಕೂಡ ಇರುತ್ತದೆ. ಆದ್ದರಿಂದಲೇ ಇದನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ. ಅದೇ ಸಮಯದಲ್ಲಿ ಇದು ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read