ಸಫಲತೆ ಪ್ರಾಪ್ತಿಗೆ ಮನೆಯಲ್ಲಿಡಬೇಡಿ ಈ ʼವಸ್ತುʼ

ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗೋದಿಲ್ಲ. ಪದೇ ಪದೇ ಅಸಫಲತೆ ಕಾಡುತ್ತದೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಅಶುಭ ಫಲಕ್ಕೆ ಕಾರಣವಾಗುತ್ತವೆ. ಬಡತನ ಹೊಡೆದೋಡಿಸಿ ಸಫಲತೆ ಪ್ರಾಪ್ತಿಗೆ ಮನೆಯಲ್ಲಿರುವ ಕೆಲವೊಂದು ವಸ್ತುಗಳನ್ನು ತಕ್ಷಣ ಹೊರಗೆ ಹಾಕಿ.

ಮಲಗುವ ಕೋಣೆಯಲ್ಲಿ ಎಂದೂ ಕನ್ನಡಿಯನ್ನು ಹಾಕಬೇಡಿ. ಇದು ಪತಿ-ಪತ್ನಿ ಮಧ್ಯೆ ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆಯಾಗಲು ಕಾರಣವಾಗುತ್ತದೆ. ಇದು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮನೆಯ ಕಪಾಟಿನ ಬಾಗಿಲನ್ನು ಸದಾ ತೆಗೆದಿಡಬೇಡಿ. ಇದು ಬಡತನವನ್ನು ಆಹ್ವಾನಿಸುತ್ತದೆ. ಮನೆಯಲ್ಲಿ ಒಂದಿಲ್ಲೊಂದು ಸಮಸ್ಯೆ ಕಾಡಲು ಕಾರಣವಾಗುತ್ತದೆ.

ಮನೆಯಲ್ಲಿರುವ ಕಪಾಟನ್ನು ಖಾಲಿ ಇಡಬೇಡಿ. ಕಪಾಟಿನಲ್ಲಿ ಸದಾ ಬೆಳ್ಳಿಯ ಒಂದು ನಾಣ್ಯ ಹಾಗೂ ಕೆಂಪು ಬಟ್ಟೆಯಿರಲಿ.

ಪೊರಕೆ ಹಾಗೂ ಕಸದ ಬುಟ್ಟಿಯನ್ನು ಎಂದೂ ಎಲ್ಲರು ನೋಡವಂತಹ ಸ್ಥಳದಲ್ಲಿ ಇಡಬೇಡಿ. ಮನೆ ಮುಂದೆಯಂತೂ ಅಪ್ಪಿತಪ್ಪಿ ಇಡಬೇಡಿ. ಇದು ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡದಂತೆ ತಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read