ಸಕ್ಕರೆ ಕಾಯಿಲೆ ಇರುವವರು 4 ವಿಧಾನಗಳಲ್ಲಿ ಇಳಿಸಬಹುದು ತೂಕ

ಭಾರತದಲ್ಲಿ ಸುಮಾರು 7.7 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಭಾರತವನ್ನು ವಿಶ್ವದ ಮಧುಮೇಹ ರಾಜಧಾನಿ ಎಂದು ಕರೆಯಲಾಗುತ್ತದೆ. ಮಧುಮೇಹ ರೋಗಿಗಳಲ್ಲಿ ಬೊಜ್ಜು ಸಾಮಾನ್ಯ ಸಮಸ್ಯೆಯಾಗಿದೆ. ಸಂಶೋಧನೆಯ ಪ್ರಕಾರ, ಹೊಟ್ಟೆಯ ಬೊಜ್ಜು ಮಧುಮೇಹದ ಅಪಾಯದ ಸೂಚನೆ. ಸಕ್ಕರೆ ಕಾಯಿಲೆಯ ಜೊತೆಗೆ ಬೊಜ್ಜಿನ ಸಮಸ್ಯೆ ಕೂಡ ಸೇರಿಕೊಂಡರೆ ಹೃದ್ರೋಗ, ಹೃದಯಾಘಾತ, ನರ ಮತ್ತು ಮೂತ್ರಪಿಂಡಕ್ಕೆ ಹಾನಿಯ ಸಾಧ್ಯತೆ ಹೆಚ್ಚು.

ತೂಕ ಹೆಚ್ಚಾಗಲು ಮತ್ತು ಮಧುಮೇಹ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣ ಆನುವಂಶಿಕತೆ. ಇದರ ಜೊತೆಗೆ ಕೈಗಾರಿಕೀಕರಣ, ಪರಿಸರ ಮತ್ತು ಜೀವನಶೈಲಿಯ ಬದಲಾವಣೆಗಳು. ಹೆಚ್ಚಿನ ಕ್ಯಾಲೋರಿ ಆಹಾರ ಸೇವನೆ ಮತ್ತು ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ ಇಂತಹ ಅಪಾಯಕಾರಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಸಕ್ಕರೆ ಕಾಯಿಲೆ ಇರುವವರು ಕೂಡ ತಮ್ಮ ತೂಕವನ್ನು ನಿಯಂತ್ರಿಸಬಹುದು, ಅದು ಹೇಗೆ ಅನ್ನೋದನ್ನು ನೋಡೋಣ.

ಕಡಿಮೆ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿ

ಸಂಸ್ಕರಿಸಿದ ಸಕ್ಕರೆ, ಸಿಹಿತಿಂಡಿಗಳು, ಕೋಲಾಗಳು ಮತ್ತು ಜ್ಯೂಸ್‌ಗಳಂತಹ ಕಾರ್ಬೋಹೈಡ್ರೇಟ್‌ಗಳ ಸೇವೆನೆಯನ್ನು ತಪ್ಪಿಸಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ತಕ್ಷಣದ ಏರಿಕೆಗೆ ಕಾರಣವಾಗುತ್ತದೆ. ಬಿಳಿ ಅಕ್ಕಿ, ಬ್ರೆಡ್, ಪಿಜ್ಜಾ, ಉಪಹಾರ ಧಾನ್ಯಗಳು, ಪೇಸ್ಟ್ರಿಗಳು ಮತ್ತು ಪಾಸ್ತಾಗಳಂತಹ ಜಂಕ್‌ ಫುಡ್‌ಗಳಿಂದ ದೂರಿವಿರಿ.

ಹೆಚ್ಚಿನ ಫೈಬರ್‌ಯುಕ್ತ ಆಹಾರ

ಧಾನ್ಯಗಳು, ಕಾಳುಗಳು ಮತ್ತು ದ್ವಿದಳ ಧಾನ್ಯಗಳು, ಸೀಡ್ಸ್‌ಮ ಹಣ್ಣು, ತರಕಾರಿಗಳು, ಲಿನ್ಸೆಡ್ ಬೀಜಗಳು, ಮೆಂತ್ಯ, ಓಟ್ಮೀಲ್ ಇತ್ಯಾದಿಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಫೈಬರ್‌ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆ ಮೂಲಕ ತೂಕ ಕಡಿಮೆ ಮಾಡಿಕೊಳ್ಳಬಹುದು.

ಹೊರಗಿನ ತಿಂಡಿ-ತಿನಿಸುಗಳಿಂದ ದೂರವಿರಿ

ಹೋಟೆಲ್‌ ಮತ್ತಿತರ ಈಟರಿಗಳಲ್ಲಿ ತಿನ್ನುವುದರನ್ನು ಕಡಿಮೆ ಮಾಡಿ. ಮನೆಯಲ್ಲೇ ತಾಜಾ ಮಾಡಿದ ಊಟವನ್ನು ಸೇಸಿಸಿ. ಇದು ರಕ್ತದಲ್ಲಿನ ಸಕ್ಕರೆಯನ್ನು ಮಾತ್ರವಲ್ಲದೆ ಹೈಡ್ರೋಜನೀಕರಿಸಿದ ಎಣ್ಣೆಯ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೃದ್ರೋಗದ ಅಪಾಯವಿರುವುದಿಲ್ಲ.

 ವ್ಯಾಯಾಮ

ದೈಹಿಕ ಚಟುವಟಿಕೆಯು ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹವು ಶಕ್ತಿಗಾಗಿ ಸಕ್ಕರೆಯನ್ನು ಬಳಸುತ್ತದೆ ಮತ್ತು  ಇನ್ಸುಲಿನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತದೆ. ವಾರಕ್ಕೆ ಕನಿಷ್ಠ 150 ನಿಮಿಷ ವ್ಯಾಯಾಮ ಮಾಡುವುದು ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read