ಸಂತಾನ ವಿಳಂಬವಾಗುತ್ತಿದ್ದರೆ ಹೀಗೆ ಪಠಿಸಿ ವೇಣುಗೋಪಾಲನ ಮಂತ್ರ

ಪ್ರತಿ ದಂಪತಿಗಳು ಮದುವೆಯಾದ ಕೆಲವು ದಿನಗಳ ನಂತರ ಸಂತಾನಕ್ಕಾಗಿ ಅಪೇಕ್ಷೆ ಪಡುವುದು ಸಹಜ. ಇತ್ತೀಚಿನ ದಿನಗಳಲ್ಲಿ ಕೆಲವು ವರ್ಷಗಳವರೆಗೆ ಮಗುವಿನ ಆಗಮನವನ್ನು ಮುಂದೂಡಿದರೂ ಜೀವನದಲ್ಲಿ ಒಂದಾದರೂ ಮಗು ಹೊಂದಲೇ ಬೇಕು ಎಂಬ ಅಭಿಮತ ಇದ್ದೇ ಇದೆ.

ತಾವಾಗಿ ಸಂತಾನವನ್ನು ಮುಂದೂಡಿಯೋ, ಕೆಲವು ಶಾರೀರಿಕ ಸಮಸ್ಯೆಯಿಂದಲೋ ಗರ್ಭಧಾರಣೆ ಸಮಸ್ಯೆ ಕಾಡುತ್ತದೆ. ಇದಕ್ಕಾಗಿ ಅನೇಕ ವೈದ್ಯರು, ಪೂಜೆ ಪುನಸ್ಕಾರಗಳು, ವ್ರತ ನಿಯಮಗಳನ್ನು ಪಾಲಿಸುವವರು ಎಷ್ಟೋ ಜನ ಇದ್ದಾರೆ.

ಸಂತಾನ ಅಪೇಕ್ಷಿಸುತ್ತಿರುವ ಯಾರೇ ಆದರೂ ಭಕ್ತಿಯಿಂದ ಸಂತಾನ ವೇಣುಗೋಪಾಲಸ್ವಾಮಿ ಮಂತ್ರವನ್ನು ಪಠಿಸಿದರೆ ಖಂಡಿತಾ ಕೃಷ್ಣನಂತಹಾ ಮುದ್ದು ಮಗು ನಿಮ್ಮ ಮಡಿಲು ಸೇರುತ್ತದೆ.

ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ. ದೇವಕೀಸುತ ಗೋವಿಂದ ವಾಸುದೇವ ಜಗತ್ಪತೇ. ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ. ಓಂ ನಮೋ ಭಗವತೇ ವಾಸುದೇವಾಯ

ಈ ಮಂತ್ರವನ್ನು ಪ್ರತಿ ಬುಧವಾರ ಬೆಳಗ್ಗೆ ಪೂಜಾ ಸಮಯದಲ್ಲಿ ಕನಿಷ್ಠ 21 ರಿಂದ ಗರಿಷ್ಠ 108 ಬಾರಿ 48 ದಿನಗಳ ಕಾಲ ಜಪಿಸಿ, ಸಿಹಿ ಅವಲಕ್ಕಿಯನ್ನು ಕೃಷ್ಣನಿಗೆ ನೈವೇದ್ಯ ಮಾಡಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read