ಸಂಗಾತಿ ಮುಂದೆ ಈ ವಿಷಯದ ಬಗ್ಗೆ ಮಾತನಾಡಲೇಬೇಡಿ

ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದ್ರೆ ಹೋಯ್ತು ಎನ್ನುವ ಗಾದೆ ಇದೆ. ಇದು ಎಲ್ಲ ಸಂದರ್ಭಗಳಲ್ಲಿ ಎಲ್ಲರಿಗೂ ಅನ್ವಯವಾಗುತ್ತದೆ. ಸಂಗಾತಿ ಎಷ್ಟೇ ಆಪ್ತವಾಗಿರಲಿ ಆದ್ರೆ ಅವರ ಜೊತೆ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು. ಕೆಲವೊಮ್ಮೆ ನಾವು ಆಡುವ ಮಾತುಗಳು ಸಂಬಂಧವನ್ನು ಹಾಳು ಮಾಡುತ್ತವೆ. ಪುರುಷರು ಪತ್ನಿ ಅಥವಾ ಗೆಳತಿ ಜೊತೆ ಮಾತನಾಡುವ ಮೊದಲೊಮ್ಮೆ ಯೋಚನೆ ಮಾಡಬೇಕು.

ಹೊಟೇಲ್ ಗಳಿಗೆ ಹೋದಾಗ ಸಂಗಾತಿ ತಿನ್ನುವ ಆಹಾರದ ಬಗ್ಗೆ ಎಂದೂ ಕಮೆಂಟ್ ಮಾಡಬೇಡಿ. ನೀನು ಇಷ್ಟೆಲ್ಲ ತಿನ್ನುತ್ತೀಯಾ ಎಂದು ಕೇಳಲೇಬೇಡಿ. ಅಪ್ಪಿತಪ್ಪಿ ನೀವು ಹೇಗೆ ಕೇಳಿದ್ರೆ ಆಕೆ ಬೇರೆ ರೀತಿ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ನಾನು ತುಂಬಾ ದಪ್ಪಗಿದ್ದೇನೆ ಎಂಬುದನ್ನು ಪರೋಕ್ಷವಾಗಿ ಹೇಳ್ತಿದ್ದಾನೆಂದು ಆಕೆ ನಿಮ್ಮನ್ನು ತಪ್ಪು ತಿಳಿಯಬಹುದು.

ಪತ್ನಿ ಅಥವಾ ಗೆಳತಿ ಜೊತೆ ಇರುವಾಗ ಇನ್ನೊಂದು ಹುಡುಗಿಯ ಬಗ್ಗೆ ಮಾತನಾಡಬೇಡಿ. ವಾಹ್, ಹುಡುಗಿ ಸುಂದರವಾಗಿದ್ದಾಳೆಂದು ಇನ್ನೊಬ್ಬಳನ್ನು ಹೊಗಳಿದ್ರೆ ನಿಮ್ಮ ಕಥೆ ಮುಗಿದಂತೆ. ಮಹಿಳೆಯಾದವಳು ತನ್ನ ಸಂಗಾತಿ ನನ್ನ ಸೌಂದರ್ಯವನ್ನು ಗುಣಗಾನ ಮಾಡಲಿ ಎಂದು ಬಯಸ್ತಾಳೆ.

ನೀನು ನನ್ನ ತಾಯಿಯಂತೆ ಮಾತನಾಡ್ತೀಯಾ ಎಂದು ಹೆಂಡತಿ ಮುಂದೆ ಹೇಳಬೇಡಿ. ನಿಮ್ಮ ಸಂಗಾತಿಯನ್ನು ತಾಯಿ, ಸಹೋದರಿ, ಸ್ನೇಹಿತೆ ಯಾರಿಗೂ ಹೋಲಿಸಬೇಡಿ. ಆಕೆಗೆ ಹೋಲಿಕೆ ಇಷ್ಟವಾಗುವುದಿಲ್ಲ. ತನ್ನನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಬೇಕೆಂದು ಆಕೆ ಬಯಸ್ತಾಳೆ.

ಹಳೆಯ ಗರ್ಲ್ ಫ್ರೆಂಡ್ ಬಗ್ಗೆಯೂ ಮಾತನಾಡಬೇಡಿ. ಮಾಜಿ ಪ್ರೇಯಸಿ ಹೀಗೆ ಮಾಡ್ತಾ ಇರಲಿಲ್ಲ. ಆಕೆಗೆ ಅದು ಇಷ್ಟವಾಗ್ತಿರಲಿಲ್ಲ ಎಂದು ಸಂಗಾತಿ ಮುಂದೆ ಹೇಳಬೇಡಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read