ಸಂಕ್ರಾಂತಿ ಹಬ್ಬದ ಆಚರಣೆಗೆ ಭರದ ಸಿದ್ಧತೆ

ಶಿವಮೊಗ್ಗ: ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಗೆ ಭರದ ಸಿದ್ಧತೆ ನಡೆದಿದ್ದು, ಜನರು ಹಬ್ಬಕ್ಕಾಗಿ ವಿವಿಧ ಸಾಮಗ್ರಿಗಳ ಖರೀದಿಗೆ ಇಂದು ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದರು.

ನಗರದ ಮಾರುಕಟ್ಟೆಗಳು ಹಾಗೂ ಮಳಿಗೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಕಂಡುಬಂದರು. ಗಾಂಧಿಬಜಾರ್, ನೆಹರು ರಸ್ತೆ ದುರ್ಗಿಗುಡಿ, ಲಕ್ಷ್ಮಿ ಟಾಕೀಸ್, ಪೊಲೀಸ್ ಚೌಕಿ, ಗೋಪಾಳ, ಬಿ ಹೆಚ್ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳು ಗ್ರಾಹಕರಿಂದ ಗಿಜಿಗುಡುತ್ತಿತ್ತು. ಹೊಸ ಬಟ್ಟೆ ಖರೀದಿ, ದಿನಸಿ ಖರೀದಿಗೆ ಜನ ಬಂದಿದ್ದರಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು.

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬದ ಸ್ವಾಗತಿಸಲು ಜನತೆ ಸಿದ್ಧರಾಗಿದ್ದು ಹೂವು ಹಣ್ಣಿನ ವ್ಯಾಪಾರ ಭರಾಟೆ ಕಂಡುಬಂತು. ಅವರೆಕಾಯಿ, ಕಬ್ಬು, ಗೆಣಸು, ಕಡಲೆಕಾಯಿ, ಹೂವು, ಹಣ್ಣುಗಳ ರಾಶಿ ರಾಶಿ ಬಂದಿದ್ದು ಕಣ್ಸೆಳೆಯುತ್ತಿದೆ. ಕಬ್ಬು, ಅವರೆ ಕೊಳ್ಳುವವರ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು.
ಬೆಲೆ ಏರಿಕೆ ನಡುವೆ ಸಹ ಗ್ರಾಹಕರು ಖರೀದಿ ನಡೆಸಿದ್ದು, ಸಂಕ್ರಾಂತಿಗಾಗಿ ಹಿಂದಿನ ದಿನವೇ ರಾಶಿ ರಾಶಿ ಕಬ್ಬು ಬಂದಿದೆ. ಕಬ್ಬು ಪ್ರತಿ ಜಲ್ಲೆಗೆ 30-40 ರೂ.ವರೆಗಿದ್ದರೆ, ಗೆಣಸಿಗೆ ಕೆಜಿ 40 ರೂ ,ಅವರೆಕಾಯಿ ಕೆಜಿಗೆ 60-70 ರೂ ನಂತೆ ಮಾರಾಟ ನಡೆಯಿತು. ಎಳ್ಳು-ಬೆಲ್ಲ ಹಾಗೂ ಸಕ್ಕರೆ ಅಚ್ಚು ಕೆ.ಜಿ.ಗೆ 250-300 ರೂ.ವರೆಗೆ ಮಾರಾಟವಾಗುತ್ತಿತ್ತು.

ಹೂವು ದುಬಾರಿ:

ಎಲ್ಲ ಬಗೆಯ ಹೂವಿನ ಬೆಲೆಗಳೂ ಗಗನಕ್ಕೇರಿವೆ. ಚಳಿಗಾಲವಾದ್ದರಿಂದ ಉತ್ತಮ ಹೂವು ಬರುವುದು ಕಡಿಮೆ. ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಸೇವಂತಿಗೆ ಮಾರಿಗೆ 100 ರೂ, ಕಾಕಡ ಮಾರಿಗೆ 60ರೂ ಇತ್ತು.

ಹಣ್ಣಿನ ದರ ಸಹ ಹೆಚ್ಚಾಗಿದ್ದು, ಪುಟ್ಟಬಾಳೆ ಕೆಜಿಗೆ 60 ಹಾಗೂ ಪಚ್ಚಬಾಳೆ ಕೆಜಿಗೆ 40 ರೂನಂತೆ ಮಾರಾಟ ಮಾಡುತ್ತಿದ್ದಾರೆ. ಕಿತ್ತಳೆಹಣ್ಣು ಕೆಜಿಗೆ 80 ರೂ. ಇದ್ದರೆ, ದಾಳಿಂಬೆ 200 ರೂ.ಬೆಲೆಯಿದೆ. ಸೇಬು 120 ರಿಂದ 140 ರೂಪಾಯಿ, ದ್ರಾಕ್ಷಿ 150 ರೂಪಾಯಿ, ಸಪೋಟ 80 ರೂಪಾಯಿ ಬೆಲೆಯಿದ್ದು ವ್ಯಾಪಾರಿಗಳು ಗ್ರಾಹಕರನ್ನು ಎದುರು ನೋಡಿವ ಸ್ಥಿತಿಯಿದೆ. ಆದರೆ ತರಕಾರಿ ಬೆಲೆ ಅಷ್ಟಾಗಿ ಏರಿಕೆಯಾಗಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read