 ಸಂಕ್ರಾಂತಿ ಹಬ್ಬ ಇನ್ನೇನು ಹತ್ತಿರ ಸಮೀಪಿಸುತ್ತಿದೆ. ಹಬ್ಬದ ದಿನ ಬೆಳಗ್ಗೆ ತಿಂಡಿಗೆ ಎಲ್ಲರೂ ಪೊಂಗಲ್ ತಯಾರಿಸುವುದು ಮಾಮೂಲು. ಅದೇ ಸಿಹಿ ಪೊಂಗಲ್, ಖಾರ ಪೊಂಗಲ್ ತಯಾರಿಸುವ ಬದಲು ಈ ಬಾರಿ ಆರೋಗ್ಯಕರ ಪಾಲಾಕ್ ಪೊಂಗಲ್ ತಯಾರಿಸಿ. ಇಲ್ಲಿದೆ ಪಾಲಕ್ ಪೊಂಗಲ್ ತಯಾರಿಸುವ ವಿಧಾನ.
ಸಂಕ್ರಾಂತಿ ಹಬ್ಬ ಇನ್ನೇನು ಹತ್ತಿರ ಸಮೀಪಿಸುತ್ತಿದೆ. ಹಬ್ಬದ ದಿನ ಬೆಳಗ್ಗೆ ತಿಂಡಿಗೆ ಎಲ್ಲರೂ ಪೊಂಗಲ್ ತಯಾರಿಸುವುದು ಮಾಮೂಲು. ಅದೇ ಸಿಹಿ ಪೊಂಗಲ್, ಖಾರ ಪೊಂಗಲ್ ತಯಾರಿಸುವ ಬದಲು ಈ ಬಾರಿ ಆರೋಗ್ಯಕರ ಪಾಲಾಕ್ ಪೊಂಗಲ್ ತಯಾರಿಸಿ. ಇಲ್ಲಿದೆ ಪಾಲಕ್ ಪೊಂಗಲ್ ತಯಾರಿಸುವ ವಿಧಾನ.
ಬೇಕಾಗುವ ಸಾಮಾಗ್ರಿಗಳು
ಅಕ್ಕಿ – 1 ಕಪ್
 ಹೆಸರುಬೇಳೆ – 3/4 ಕಪ್
 ಕತ್ತರಿಸಿದ ಪಾಲಾಕ್ ಸೊಪ್ಪು – 2 ಕಪ್ ಒಣಮೆಣಸಿನಕಾಯಿ 5-6
 ದಾಲ್ಚಿನ್ನಿ ಚಕ್ಕೆ – 2 ತುಂಡು
 ಕಾಳುಮೆಣಸು 4-5
 ಲವಂಗ – 3
 ಏಲಕ್ಕಿ ಪುಡಿ – 1/2 ಚಮಚ
 ಶುಂಠಿ ತುರಿ – 1/2 ಚಮಚ
 ಜೀರಿಗೆ – 1 ಚಮಚ
 ತೆಂಗಿನಕಾಯಿ ತುರಿ – 1/4 ಕಪ್
 ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ
 ಉಪ್ಪು ರುಚಿಗೆ ತಕ್ಕಷ್ಟು
 ಎಣ್ಣೆ ಬೇಕಾದಷ್ಟು
 ಸಾಸಿವೆ – 1 ಚಮಚ
 ಇಂಗು – 1/4 ಚಮಚ
 ಅರಿಶಿಣ – 1/2 ಚಮಚ
 ಗೋಡಂಬಿ – 5-6
 ತುಪ್ಪ – 1/4 ಕಪ್
ಮಾಡುವ ವಿಧಾನ
ತುಪ್ಪದಲ್ಲಿ ಹುರಿದು ಇರಿಸಿದ ಅಕ್ಕಿ ಹಾಗೂ ಹೆಸರುಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಟ್ಟು ಕೊಳ್ಳಬೇಕು. ಚಕ್ಕೆ, ಕಾಳುಮೆಣಸು, ಲವಂಗ, ಶುಂಠಿ ತುರಿ, ಜೀರಿಗೆ, ಗೋಡಂಬಿ ಹಾಗೂ ತೆಂಗಿನಕಾಯಿ ತುರಿಯನ್ನು ಸೇರಿಸಿ ನುಣ್ಣಗೆ ಅರೆಯಬೇಕು.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಸಾಸಿವೆ, ಇಂಗು, ಅರಿಶಿಣ, ಒಣಮೆಣಸಿನಕಾಯಿ ಸೇರಿಸಿ ಒಗ್ಗರಣೆ ತಯಾರಿಸಿಕೊಳ್ಳಬೇಕು. ನಂತರ ಪಾಲಾಕ್ ಸೊಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಬಾಡಿಸಿಕೊಳ್ಳಬೇಕು.
ನಂತರ ಉಪ್ಪು, ಅರೆದಿರುವ ಮಸಾಲೆ ಮಿಶ್ರಣ ಹಾಕಿ ಕೈಯಾಡಿಸಬೇಕು. ಮಿಶ್ರಣಕ್ಕೆ ತುಪ್ಪ, ಬೇಯಿಸಿದ ಅಕ್ಕಿ, ಹೆಸರುಬೇಳೆ ಹಾಕಿ ಚೆನ್ನಾಗಿ ಕಲಸಬೇಕು. ನಂತರ ಒಲೆಯಿಂದ ಕೆಳಗಿಳಿಸಿ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಘಮಘಮಿಸುವ ಪಾಲಕ್ ಪೊಂಗಲ್ ಸವಿಯಲು ಸಿದ್ಧ.

 
			 
		 
		 
		 
		 Loading ...
 Loading ... 
		 
		 
		