ಶ್ರೀಮಂತ ಉದ್ಯಮಿ ಮುಖೇಶ್‌ ಅಂಬಾನಿ ಮನೆಯಲ್ಲಿ ಬಾಣಸಿಗರ ಸಂಬಳವೆಷ್ಟು ಗೊತ್ತಾ…..?

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಐಷಾರಾಮಿ ಬಂಗಲೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಫೋರ್ಬ್ಸ್ ಪ್ರಕಾರ ಸದ್ಯ ಮುಖೇಶ್‌ ಅಂಬಾನಿ ವಿಶ್ವದ 13 ನೇ ಶ್ರೀಮಂತ ವ್ಯಕ್ತಿ. ಅವರ ನಿವ್ವಳ ಆಸ್ತಿಯ ಮೌಲ್ಯ 83 ಬಿಲಿಯನ್ ಡಾಲರ್, ಸರಿಸುಮಾರು 723 ಸಾವಿರ ಕೋಟಿ ರೂಪಾಯಿ. ಭಾರತದಲ್ಲಿ ಅಂಬಾನಿ ಕುಟುಂಬವು ಐಷಾರಾಮಿ ಮನೆ ಮತ್ತು ಅನೇಕ ದುಬಾರಿ ಆಸ್ತಿಗಳನ್ನು ಹೊಂದಿದೆ. ಅಂಬಾನಿ ಅವರ ಬಳಿ ದುಬಾರಿ ಕಾರುಗಳೂ ಸಾಕಷ್ಟಿವೆ.

ಅಂಬಾನಿ ಕುಟುಂಬ ವಾಸವಾಗಿರುವ ನಿವಾಸ ಮನೆ ಆಂಟಿಲಿಯಾ, ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಆಂಟಿಲಿಯಾದಲ್ಲಿ ಸಾವಿರಾರು ಕೆಲಸಗಾರರಿದ್ದಾರೆ. ಮುಖೇಶ್ ಅಂಬಾನಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನೀಡುವ ಸಂಬಳದ ಮೊತ್ತವು ಭಾರತದಲ್ಲಿ ಸಿಎ ಮತ್ತು ಎಂಬಿಎ ಉದ್ಯೋಗಿಗಳ ಸರಾಸರಿ ವೇತನಕ್ಕಿಂತಲೂ ಹೆಚ್ಚು. ಸಂಬಳದ ಜೊತೆಗೆ ಅಂಬಾನಿ ಹೌಸ್ ಉದ್ಯೋಗಿಗಳು ವಿಮೆ ಮತ್ತು ಇತರ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.

ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಅಡುಗೆ ಮಾಡುವ ಬಾಣಸಿಗರಿಗೆ ಕೊಡುವ ವೇತನದ ಬಗ್ಗೆ ಕೇಳಿದ್ರೆ ಎಂಥವರು ಕೂಡ ಬೆಚ್ಚಿಬೀಳ್ತಾರೆ. ಆಂಟಿಲಿಯಾದಲ್ಲಿ ಬಾಣಸಿಗರಿಗೆ ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತದೆ. ಅಂದರೆ ಅವರು ವಾರ್ಷಿಕವಾಗಿ 24 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಮುಖೇಶ್ ಅಂಬಾನಿ ಸರಳ ಸಸ್ಯಾಹಾರಿ ಆಹಾರಕ್ಕೆ ಆದ್ಯತೆ ನೀಡುತ್ತಾರೆ. ಬೇಳೆಕಾಳುಗಳು, ಅನ್ನ, ಚಪಾತಿ ಮತ್ತು ತರಕಾರಿಗಳನ್ನೇ ನಿಯಮಿತವಾಗಿ ಸೇವನೆ ಮಾಡುತ್ತಾರೆ.

ಬೆಳಗಿನ ಉಪಾಹಾರಕ್ಕೆ ಒಂದು ಲೋಟ ಪಪ್ಪಾಯಿ ಜ್ಯೂಸ್, ಇಡ್ಲಿ-ಸಾಂಬಾರ್ ಅವರ ನೆಚ್ಚಿನ ತಿನಿಸು. ಪಾಪ್ಡಿ ಚಾಟ್‌ನಂತಹ ತಿಂಡಿಗಳನ್ನು ಸಹ ಇಷ್ಟಪಡುತ್ತಾರಂತೆ. ಮೂಲಗಳ ಪ್ರಕಾರ ಅಂಬಾನಿ ಅವರ ಕಾರು ಚಾಲಕರು ಕೂಡ ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾವನ್ನು ನೋಡಿಕೊಳ್ಳಲು 600 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಅವರ ಮಾಸಿಕ ವೇತನ ಕೂಡ ಒಂದು ಲಕ್ಷಕ್ಕೂ ಅಧಿಕ ಎನ್ನಲಾಗ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read