ಶ್ರೀನಿಧಿ ಸಿಲ್ಕ್ & ಟೆಕ್ಸ್ ಟೈಲ್ಸ್ 40ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ

ಶಿವಮೊಗ್ಗ: ನಗರದ ಪ್ರಸಿದ್ದ ಶ್ರೀನಿಧಿ ಸಿಲ್ಕ್ ಆಂಡ್ ಟೆಕ್ಸ್ ಟೈಲ್ಸ್ 40ನೇ ವರ್ಷಾಚರಣೆಯ ವಿಶೇಷ ಕಾರ್ಯಕ್ರಮಗಳನ್ನು ಮೇ 17ರಿಂದ 19 ರವರೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಮೈದಾನ (ಕುವೆಂಪು ರಂಗ ಮಂದಿರದ) ಹಿಂಭಾಗದಲ್ಲಿ ಆಯೋಜಿಸಲಾಗಿದೆ ಎಂದು ಮಾಲೀಕ ಟಿ.ಆರ್ ಅಶ್ವತ್ಥ್ ನಾರಾಯಣಶೆಟ್ಟಿ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೈದಾನದ ಆವರಣದಲ್ಲಿ ಫ್ಯಾನ್ಸಿ ಸೀರೆಗಳ, ಚೂಡಿದಾರ್, ಶರ್ಟ್, ಪ್ಯಾಂಟ್ ಗಳ ಹಾಗೂ ಬೆಡ್ ಶೀಟ್ಗಳ ವಿಶೇಷ ಪ್ರದರ್ಶನ ಹಾಗೂ ಶೇ. 15 ರ ರಿಯಾಯಿತಿ ದರದಲ್ಲಿ ಮಾರಾಟವನ್ನು ಏರ್ಪಡಿಸಲಾಗಿದೆ ಎಂದರು.

ಇದರ ಜೊತೆಗೆ ಶುಚಿ-ರುಚಿಯ ತಿಂಡಿ ತಿನಿಸುಗಳ ಮಾರಾಟ ವ್ಯವಸ್ಥೆಯೂ ಇದೆ. ಮುಖ್ಯವಾಗಿ ಮೇ 17 ಹಾಗೂ 18 ರಂದು ಫ್ಯಾಷನ್ ಶೋ ಹಾಗೂ ಸ್ಪರ್ಧೆಗಳು ನಡೆಯಲಿದೆ ಎಂದರು.

5 ರಿಂದ 12 ವರ್ಷಗಳ ವಯೋಮಾನದ ಮಕ್ಕಳು ಹಾಗೂ ಯುವಕ, ಯುವತಿಯರು ಮತ್ತು ಮಹಿಳೆಯರು ಪಾಲ್ಗೊಳ್ಳಬಹುದಾಗಿದೆ. ಹಾಗೆಯೇ 5 ರಿಂದ 12 ವರ್ಷದ ಮಗುವಿನೊಂದಿಗೆ “ತಾಯಿ- ಮಗು” ಸ್ಪರ್ಧೆಗಳು ನಡೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ನಗರದ ನಗರದ ಪ್ರಸಿದ್ಧ ನೃತ್ಯ ತಂಡಗಳಾದ ಸ್ಟೆಪ್ ಹೋಲ್ಡರ್ಸ್ ಇಮ್ಯಾಜಿನ್ ಡ್ಯಾನ್ಸ್ ಸ್ಟುಡಿಯೋ ಮತ್ತು ಸಹಚೇತನ ನಾಟ್ಯ ತಂಡಗಳಿಂದ ನೃತ್ಯ ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.

ಮೇ 19ರ ಭಾನುವಾರ ಸಂಜೆ 6 ಗಂಟೆಗೆ ರಿಂದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ, ಗಾಯಕ ಶಿವಮೊಗ್ಗದವರೇ ಆದ ಋತ್ವಿಕ್ ಮುರಳಿಧರ್ ಮತ್ತು ತಂಡದವರಿಂದ ಸಂಗೀತ ಸಂಜೆ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

6 ಲಕ್ಷ ರೂಪಾಯಿಗಳ ಬಹುಮಾನಗಳ ಡ್ರಾ ನಡೆಯಲಿದ್ದು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಆಹ್ವಾನಿತರು ಹಾಗೂ ಸಭಿಕರ ಸಮ್ಮುಖದಲ್ಲಿ ಈ ಡ್ರಾ ನಡೆಯಲಿದೆ ಎಂದರು.

ನಗರದ ಸಾರ್ವಜನಿಕರು ಹಾಗೂ “ಶ್ರೀನಿಧಿ”ಯ ಗ್ರಾಹಕರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯ ಪಾಲ್ಗೊಳ್ಳುವಂತೆ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ವೆಂಕಟೇಶ ಮೂರ್ತಿ, ಬದರಿ ಪ್ರಸಾದ್, ಚೇತನ್, ರಾಮಪ್ರಸಾದ್, ಶ್ರೀಗಿರಿ ಪ್ರಮುಖ್ ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read