ಶೇವಿಂಗ್ ಮಾಡುವಾಗ ಆದ ಗಾಯಕ್ಕೂ ಇದೆ ಮನೆಮದ್ದು

ಶೇವಿಂಗ್ ಮಾಡಿಕೊಳ್ಳುವಾಗ ಕೆಲವೊಮ್ಮೆ ಗಾಯಗಳಾಗುತ್ತವೆ. ಇವು ಸುಟ್ಟ ಗಾಯಗಳಾಗಿರಬಹುದು ಅಥವಾ ಬ್ಲೇಡ್ ನಿಂದ ಕೊಯ್ದ ಗಾಯವಾಗಿರಬಹುದು. ಕೆಲವೊಮ್ಮೆ ದದ್ದುಗಳು ತುರಿಕೆಗಳಾಗಿ ಬದಲಾದ ಗಾಯಗಳಿರಬಹುದು. ಇದರ ನೋವನ್ನು ನಿವಾರಿಸಲು ಹೀಗೆ ಮಾಡಿ.

ಟೀ ಬ್ಯಾಗ್ ಅನ್ನು ಒಂದು ನಿಮಿಷ ನೀರಿನಲ್ಲಿ ನೆನೆಸಿ ಬಳಿಕ ನೋವಿರುವ ಜಾಗಕ್ಕೆ ಒತ್ತಿ ಹಿಡಿಯಿರಿ. ಇದನ್ನು ಮತ್ತೆ ಮತ್ತೆ ಪುನರಾವರ್ತಿಸಿ. ದಿನಕ್ಕೆ ಹಲವು ಬಾರಿ ಹೀಗೆ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.

ಲಿಂಬೆರಸವನ್ನು ಹತ್ತಿ ಉಂಡೆಗೆ ಮುಟ್ಟಿಸಿ ನೋವಿರುವ ಜಾಗಕ್ಕೆ ಆಗಾಗ ಹಚ್ಚಿಕೊಳ್ಳುವುದರಿಂದಲೂ ನೋವು ಕಡಿಮೆಯಾಗುತ್ತದೆ. ಆ್ಯಪಲ್ ಸೈಡರ್ ವಿನಗರ್ ನಿಂದಲೂ ಇದೇ ಪರಿಣಾಮವನ್ನು ಪಡೆಯಬಹುದು.

ಅಲೋವೆರಾದ ಜೆಲ್ ತೆಗೆದು ಮುಖಕ್ಕೆ ಹಚ್ಚಿಕೊಂಡರೆ ಗಾಯ ಹಾಗೂ ನೋವು ಮಾಯುತ್ತದೆ ಮಾತ್ರವಲ್ಲ ತ್ವಚೆಗೆ ವಿಶೇಷ ಹೊಳಪು ಸಿಗುತ್ತದೆ. ಮುಖದಲ್ಲಿ ಕಲೆಗಳಿದ್ದರೆ ಅದು ಕೂಡಾ ಮಾಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read