ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಮುಖ್ಯ ಮಾಹಿತಿಯೊಂದು ಇಲ್ಲಿದೆ. ಜೂ.22 ರಿಂದ ಜೂ.25 ರವರೆಗೆ ರೈಲ್ವೆ ಸುರಕ್ಷತೆ ಕಾಮಗಾರಿ ಕೈಗೊಂಡಿರುವ ಹಿನ್ನಲೆಯಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಾಸವಾಗಲಿದೆ. ಕೆಲ ರೈಲುಗಳು ಭಾಗಶಃ ರದ್ದಾದರೆ ಕೆಲ ರೈಲುಗಳು ತಡವಾಗಿ ಸಂಚರಿಸಲಿವೆ.

06513 ಕ್ರಮಸಂಖ್ಯೆಯ ತುಮಕೂರು-ಶಿವಮೊಗ್ಗ ರೈಲು ಅರಸೀಕೆರೆಯವರೆಗೆ ಚಲಿಸಿ ವಾಪಾಸಾಗಲಿದೆ. ಅದರಂತೆ 06514 ಕ್ರಮಸಂಖ್ಯೆಯ ಶಿವಮೊಗ್ಗ-ತುಮಕೂರು ರೈಲು ಅರಸೀಕೆರೆಯವರೆಗೆ ಚಲಿಸಿ ವಾಪಾಸಾಗಲಿದೆ. ಜೂ. 22 ರಿಂದ 24 ರವರೆಗೆ ಸಂಚಾರದಲ್ಲಿ ಈ ವ್ಯತ್ಯಾಸ ಆಗಲಿದೆ.

07365 ಸಂಖ್ಯೆಯ ಶಿವಮೊಗ್ಗ – ಚಿಕ್ಕಮಗಳೂರು ರೈಲು ಜೂ.22 ರಂದು ನಿಗದಿತ ಸಮಯಕ್ಕಿಂತ 30 ನಿಮಿಷ ತಡವಾಗಿ ಸಂಚರಿಸಲಿದೆ. 20652 ಕ್ರಮ ಸಂಖ್ಯೆಯ ತಾಳಗುಪ್ಪ – ಬೆಂಗಳೂರು ರೈಲು ಜೂ.22 ಮತ್ತು 23 ರಂದು ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ ಸಂಚರಿಸಲಿದೆ.

ಜೂ.22, 24 ಮತ್ತು 25 ರಂದು 16226 ಕ್ರಮ ಸಂಖ್ಯೆಯ ಮೈಸೂರು – ತಾಳಗುಪ್ಪ ರೈಲು, ಶಿವಮೊಗ್ಗದಿಂದ ಹೊರಡುವ 16227 ಕ್ರಮ ಸಂಖ್ಯೆಯ ತಾಳಗುಪ್ಪ – ಮೈಸೂರು ರೈಲು ನಿಗದಿತ ಸಮಯಕ್ಕಿಂತ 30 ನಿಮಿಷ ತಡವಾಗಿ ಸಂಚರಿಸಲಿದೆ. ಜೂ. 25 ರಂದು ಶಿವಮೊಗ್ಗ ಟೌನ್ – ಯಶವಂತಪುರ ರೈಲು ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ ಸಂಚರಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read