ಶಾಲೆಗೆ ಹೋಗಲು ಹಠ ಮಾಡಿದ ಬಾಲಕನನ್ನು ಹೊತ್ತುಕೊಂಡು ಹೋದ ಸಹಪಾಠಿಗಳು; ಮೊಗದಲ್ಲಿ ಮಂದಹಾಸ ಮೂಡಿಸುವ ವಿಡಿಯೋ ವೈರಲ್

ಈ ಹಿಂದೆ ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ಹೋಗುವುದೆಂದರೆ ಮಕ್ಕಳಿಗೆ ಬಲು ಕಷ್ಟ. ಅಪ್ಪ ಅಮ್ಮ ಹೊಡೆದು ಬಡಿದು, ಅಥವಾ ಚಾಕಲೇಟ್ ತೋರಿಸಿ ಶಾಲೆಗೆ ಕಳುಹಿಸಬೇಕಾಗಿತ್ತು.

ಆದರೆ ಈಗಿನ ಮಕ್ಕಳು ಹಾಗಲ್ಲ. ಶಾಲೆಗೆ ಹೋಗಲು ಖುಷಿಯಿಂದ ರೆಡಿಯಾಗಿರುತ್ತಾರೆ. ಆದರೆ ಕೆಲವರು ಈಗಲೂ ಸಹ ಶಾಲೆಗೆ ಹೋಗಲು ಮೊಂಡಾಟ ಮಾಡುತ್ತಾರೆ.

ಅಂತವುದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಲೆಗೆ ಚಕ್ಕರ್ ಹಾಕಿದ ಬಾಲಕನನ್ನು ಆತನ ಸಹಪಾಠಿಗಳು ಕೈಕಾಲು ಹಿಡಿದು ಬಲವಂತವಾಗಿ ಶಾಲೆಗೆ ಕರೆದುಕೊಂಡು ಹೋಗಿದ್ದಾರೆ.

ದಾರಿಹೋಕರೊಬ್ಬರು ಈ ದೃಶ್ಯಾವಳಿಯನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ವಿಡಿಯೋ ನಿಮ್ಮನ್ನು ಸಹ ನಿಮ್ಮ ಬಾಲ್ಯದ ದಿನಕ್ಕೆ ಕರೆದೊಯ್ಯಬಹುದು.

https://youtu.be/11rXBZ8B8TA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read