ಶಬರಿಮಲೆ ಕಾಣಿಕೆ ಹುಂಡಿಯಲ್ಲಿ ಬರೋಬ್ಬರಿ ಹತ್ತು ಕೋಟಿ ರೂ. ನಾಣ್ಯ….!

ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ನೆರೆದು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ಸಹಜವಾಗಿಯೇ ದೇವಸ್ಥಾನಕ್ಕೆ ಭಾರಿ ಆದಾಯ ಹರಿದು ಬಂದಿದೆ.

ಕಾಣಿಕೆ ಹುಂಡಿಯಲ್ಲಿ ಭಕ್ತರು ಹಾಕಿದ್ದ ನಾಣ್ಯಗಳ ಎಣಿಕೆ ಸಂಪೂರ್ಣಗೊಂಡಿದ್ದು, ಒಟ್ಟು 10 ಕೋಟಿ ರೂಪಾಯಿ ಸಂಗ್ರಹವಾಗಿದೆ. ನಾಣ್ಯಗಳ ಕಾಣಿಕೆ ಹುಂಡಿಯಲ್ಲಿ ನೋಟು, ಅರಿಶಿಣ ಭಸ್ಮ ಸಹ ಬೆರಕೆಯಾಗಿದ್ದ ಕಾರಣ ಇದನ್ನು ಪ್ರತ್ಯೇಕಿಸಿ ಎಣಿಕೆ ಮಾಡಲಾಗಿತ್ತು.

1,220 ನೌಕರರು ಎರಡು ಹಂತಗಳಲ್ಲಿ ನಾಣ್ಯಗಳನ್ನು ಎಣಿಕೆ ಮಾಡಿದ್ದು, 10 ಕೋಟಿ ರೂಪಾಯಿ ನಾಣ್ಯಗಳು ಸೇರಿದಂತೆ ದೇವಸ್ಥಾನಕ್ಕೆ ಒಟ್ಟಾರೆ 360 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read