ವೋಲ್ವೋ XC60 SUV ಬ್ಲಾಕ್‌ ಎಡಿಶನ್‌ ಬಿಡುಗಡೆ; ಇಲ್ಲಿದೆ ಬೆಲೆ ಹಾಗೂ ಫೀಚರ್‌ ಗಳ ವಿಶೇಷತೆ

ವೋಲ್ವೋ ಇಂಡಿಯಾ ತನ್ನ 2024 XC60 ಕಾರಿನ ಬ್ಲಾಕ್‌ ಮಾಡೆಲ್‌ ಅನ್ನು ಪರಿಚಯಿಸಿದೆ. ಹೊಳೆಯುವ ಕಪ್ಪು ಲೋಗೋ ಮತ್ತು ವರ್ಡ್‌ಮಾರ್ಕ್ ಈ ಕಾರಿನ ವಿನ್ಯಾಸಕ್ಕೆ ಕಳಸವಿಟ್ಟಂತಿದೆ. ಹೊಳಪುಳ್ಳ ಕಪ್ಪನೆಯ 21 ಇಂಚಿನ 5 ಸ್ಪೋಕ್ ಮಿಶ್ರಲೋಹದ ಚಕ್ರಗಳನ್ನು ಈ ರೂಪಾಂತರದಲ್ಲಿ ನೀಡಲಾಗಿದೆ.  ಫುಲ್‌ ಬಾಡಿಗೆ ಕಪ್ಪು ಓನಿಕ್ಸ್ ಪೇಂಟ್‌ನೊಂದಿಗೆ ಅತ್ಯಂತ ಐಷಾರಾಮಿ ಲುಕ್‌ ನೀಡಲಾಗಿದೆ. ವೋಲ್ವೋ ಎಕ್ಸ್‌ಸಿ60 ಬ್ಲ್ಯಾಕ್ ಎಡಿಷನ್‌ನ ಒಳಾಂಗಣ ವಿನ್ಯಾಸ ಕೂಡ ಅಂದವಾಗಿದೆ.

ಇದನ್ನು ಬ್ಲಾಕ್‌ ಹೆಡ್‌ಲೈನರ್ ಮತ್ತು ಚಾರ್ಕೋಲ್ ಇಂಟೀರಿಯರ್‌ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಹೊಸ ವೋಲ್ವೋ XC60 ಬ್ಲಾಕ್‌ ಆವೃತ್ತಿಯಲ್ಲಿ ಎರಡು ಪವರ್‌ಟ್ರೇನ್ ಆಯ್ಕೆಗಳನ್ನು ನೀಡಲಾಗಿದೆ. ಮೊದಲ ಆಯ್ಕೆ B5, ಇದು 48-V ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ನಾಲ್ಕು-ಸಿಲಿಂಡರ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಸೆಟಪ್ 4.5 ಸೆಕೆಂಡುಗಳಲ್ಲಿ 96 km/h ಅನ್ನು ಮುಟ್ಟುತ್ತದೆ ಮತ್ತು 244 Bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.ಇತರ ಆಯ್ಕೆಯೆಂದರೆ T8. ಇದು ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್ ಆಗಿದ್ದು 449 Bhp ಪವರ್‌ ಉತ್ಪಾದಿಸುತ್ತದೆ.

ಕಾರು ಕೇವಲ 4.5 ಸೆಕೆಂಡುಗಳಲ್ಲಿ 60 mph ವೇಗವನ್ನು ಪಡೆಯುತ್ತದೆ. ವಿಭಿನ್ನ ಕಾರ್ಯಕ್ಷಮತೆ, ಶಕ್ತಿ ಮತ್ತು ಚಾಲನಾ ಅನುಭವವನ್ನು ಎರಡೂ ಪವರ್‌ಟ್ರೇನ್ ಆಯ್ಕೆಗಳಲ್ಲಿ ಅನುಭವಿಸಬಹುದು. XC60 ಬ್ಲಾಕ್ ಆವೃತ್ತಿಯು 2022 ರಲ್ಲಿ ಬಿಡುಗಡೆಯಾಗಿದ್ದ S60 ಬ್ಲಾಕ್ ಆವೃತ್ತಿಯೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ. ವೋಲ್ವೋ 2022ರಲ್ಲಿ S60 ಬ್ಲಾಕ್ ಆವೃತ್ತಿಯ ಸೆಡಾನ್‌ನ 450 ಘಟಕಗಳನ್ನು ಮಾತ್ರ ಲಭ್ಯವಾಗುವಂತೆ ಮಾಡಿತ್ತು. ಆದರೆ 2024 Volvo XC60 ಬ್ಲಾಕ್ ಆವೃತ್ತಿಗೆ ಅಂತಹ ಯಾವುದೇ ಮಿತಿಯಿಲ್ಲ.

ಎಲ್ಲಾ ಹೊಸ ಬ್ಲಾಕ್‌ ರೂಪಾಂತರದ ಎಕ್ಸ್ ಶೋರೂಂ ಬೆಲೆಯನ್ನು 48,74,190 ರೂಪಾಯಿಗೆ ನಿಗದಿ ಮಾಡಲಾಗಿದೆ. ಭಾರತದಲ್ಲಿ ಇದರ ಮಾರಾಟ 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಕಾರು Mercedes Benz GLC ವರ್ಗದೊಂದಿಗೆ ಸ್ಪರ್ಧಿಸುತ್ತದೆ. ಇದು ಎರಡು ರೂಪಾಂತರಗಳು ಮತ್ತು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ಬೆಲೆ 73.50 ಲಕ್ಷದಿಂದ ಪ್ರಾರಂಭ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read