ಸ್ಯಾಂಟ್ರೋ ರವಿ ಜೊತೆಗೆ ಬಿಜೆಪಿ ನಾಯಕರು ಆಪ್ತರಾಗಿದ್ದಾರೆಂದು ಪ್ರತಿಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದು, ಇದಕ್ಕೆ ಬಿಜೆಪಿಯೂ ತಿರುಗೇಟು ನೀಡುತ್ತಿದೆ.
ಇದರ ಮಧ್ಯೆ ಇಂದು ಸ್ಯಾಂಟ್ರೋ ರವಿ, ಬಿಜೆಪಿ ಸಚಿವರ ಜೊತೆಗಿರುವ ಕೆಲವೊಂದು ಫೋಟೋಗಳನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜೊತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ ? ಸಚಿವರು ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿರುವ ಆಪ್ತತೆಗೂ, ಈತನ ದಂಧೆಗೂ ಸಂಬಂಧವಿದೆಯೇ ಬಿಜೆಪಿ ಕರ್ನಾಟಕ ಎಂದು ಪ್ರಶ್ನಿಸಿದೆ. ಅಲ್ಲದೇ ಸುಧಾಕರ್ ಅವರೇ, ತಮ್ಮ ಸಿಡಿ ತಡೆಯಾಜ್ಞೆಯ ಹಿಂದಿನ ರಹಸ್ಯ ಸ್ಯಾಂಟ್ರೋ ರವಿ ಬಳಿ ಇದೆಯೇ? ಎಂದು ವ್ಯಂಗ್ಯವಾಡಿದೆ.
ಬಿಜೆಪಿಯ ಎಲ್ಲಾ ಸಚಿವರೂ ವೇಶ್ಯಾವಾಟಿಕೆ ದಂಧೆ, ವರ್ಗಾವಣೆ ದಂಧೆಯ ಸ್ಯಾಂಟ್ರೋ ರವಿಯೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದಾರೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೂ ಆತನ ದಂಧೆಯ ಫಲಾನುಭವಿಯೇ? ಸರ್ಕಾರವನ್ನು ಪಿಂಪ್‌ಗಳು ನಿಯಂತ್ರಿಸುತ್ತಿದ್ದಾರೆಯೇ? ಕಮಿಷನ್ ಸರ್ಕಾರಕ್ಕೆ ಇನ್ನೆಷ್ಟು ಬ್ರೋಕರ್‌ಗಳಿದ್ದಾರೆ? ಎಂದು ಕೇಳಿದೆ.
https://twitter.com/INCKarnataka/status/1611257424249516033
https://twitter.com/INCKarnataka/status/1611262756648550400
https://twitter.com/INCKarnataka/status/1611291636365131777