ವೇದಿಕೆಯಲ್ಲಿ ಹಾಡುತ್ತಿದ್ದಾಗಲೇ ಪಾಪ್‌ ಗಾಯಕಿಯತ್ತ ಮೊಬೈಲ್‌ ಎಸೆದ ಪ್ರೇಕ್ಷಕ, ಮುಖಕ್ಕೆ ತೀವ್ರ ಗಾಯ….!

ಅಮೆರಿಕದ ಪಾಪ್‌ ಗಾಯಕಿ ಹಾಗೂ ಮತ್ತು ಗೀತ ರಚನೆಕಾರ್ತಿ ಬ್ಯಾಲೆಟಾ ರೆಕ್ಸಾ ಮೇಲೆ ಹಲ್ಲೆ ನಡೆದಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬರು ಆಕೆಯತ್ತ ಮೊಬೈಲ್ ಎಸೆದಿದ್ದಾರೆ. ಇದರಿಂದ ಆಕೆಯ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಕೂಡಲೇ ಬೇಬ್‌ ರೆಕ್ಸಾಳನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

33 ವರ್ಷದ ಗಾಯಕಿ ಪ್ರಸ್ತುತ ಉತ್ತರ ಅಮೆರಿಕಾ ಪ್ರವಾಸದಲ್ಲಿದ್ದಾರೆ. ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದಾಗಲೇ ಅಭಿಮಾನಿಯೊಬ್ಬರು ಆಕೆಯ ಮೇಲೆ ಮೊಬೈಲ್ ಫೋನ್ ಎಸೆದಿದ್ದಾರೆ. ಫೋನ್‌ ಮುಖಕ್ಕೆ ಅಪ್ಪಳಿಸಿದ್ದರಿಂದ ಮೂರು ಹೊಲಿಗೆಗಳನ್ನು ಹಾಕಬೇಕಾಯ್ತು.  ಗಾಯಗೊಂಡ ರೇಕ್ಸಾ, ಕಾನ್ಸರ್ಟ್‌ ಅನ್ನು ಅರ್ಧಕ್ಕೇ ಮೊಟಕುಗೊಳಿಸಿದ್ರು. ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಆಕೆ ಆಸ್ಪತ್ರೆಗೆ ತೆರಳಿದ್ದಾರೆ.

ಸಂಗೀತ ಕಾರ್ಯಕ್ರಮದ ನಂತರ ಮೀಟ್ ಅಂಡ್ ಗ್ರೀಟ್ ಆಯೋಜಿಸಬೇಕಾಗಿತ್ತು, ಆದರೆ ಅದು ಕೂಡ ರದ್ದುಗೊಂಡಿತು. ಈ ಘಟನೆಯ ಬಗ್ಗೆ ಟ್ವಿಟರ್‌ನಲ್ಲಿ ಗಾಯಕಿಯ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮೊಬೈಲ್‌ ಎಸೆದವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಗಾಯಕಿಯ ಮುಂದಿನ ಸಂಗೀತ ಕಾರ್ಯಕ್ರಮಗಳಿಗೆ ಅಡ್ಡಿಯಾದರೂ ಆಶ್ಚರ್ಯವಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read