ವೃತ್ತಿಯಲ್ಲಿ ಯಶಸ್ಸು ಸಿಗಬೇಕೆಂದ್ರೆ ಇದನ್ನು ಪಾಲಿಸಿ

ಎಷ್ಟು ಕಷ್ಟಪಟ್ಟರೂ ಕೆಲವೊಮ್ಮೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ದುಡಿಮೆ ಜೊತೆ ಅದೃಷ್ಟ ಜೊತೆಗಿದ್ದರೆ ಮಾತ್ರ ಯಶಸ್ಸು, ಪ್ರಮೋಷನ್ ಸಿಗಲು ಸಾಧ್ಯ.

ಶಿಕ್ಷಣ ಕ್ಷೇತ್ರದಲ್ಲಿ ನೀವಿದ್ದರೆ ಪ್ರಮೋಷನ್ ಗಾಗಿ ಈ ಕೆಲಸಗಳನ್ನು ಮಾಡಿ. ತಾಯಿ ಸರಸ್ವತಿ ಫೋಟೋವನ್ನು ಬುಧವಾರ ಮನೆಯಲ್ಲಿ ಸ್ಥಾಪನೆ ಮಾಡಿ. ಪ್ರತಿದಿನ ಸರಸ್ವತಿಗೆ ಬಿಳಿ ಬಣ್ಣದ ಹೂವನ್ನು ಅರ್ಪಿಸಿ. ನಂತ್ರ ಸರಸ್ವತಿಯನ್ನು ಪ್ರಾರ್ಥಿಸಿ. ಸುಮಾರು 27 ದಿನಗಳ ಕಾಲ ಸರಸ್ವತಿಯ ಪೂಜೆ ಮಾಡಿ. ಇಷ್ಟು ದಿನ ಬಿಳಿ ಬಟ್ಟೆಯನ್ನು ಧರಿಸಿ.

ವೈದ್ಯಕೀಯ ಕ್ಷೇತ್ರದಲ್ಲಿರುವವರು ಪ್ರಮೋಷನ್ ಗಾಗಿ ಪ್ರತಿ ದಿನ ಬೆಳಿಗ್ಗೆ ಸೂರ್ಯನಿಗೆ ಜಲ ಅರ್ಪಿಸಿ. ಇದಾದ ನಂತ್ರ ಅಲ್ಲಿಯೇ ನಿಂತು 27 ಬಾರಿ ಅಥವಾ 108 ಬಾರಿ ‘ಓಂ ಆದಿತ್ಯಾಯ ನಮಃ’ ಮಂತ್ರ ಜಪಿಸಿ. ನಂತ್ರ ಶೀಘ್ರ ಪ್ರಮೋಷನ್ ಗೆ ಪ್ರಾರ್ಥನೆ ಮಾಡಿ. ಇದನ್ನು ಸತತ 27 ದಿನಗಳ ಕಾಲ ಮಾಡಬೇಕು.

ಇಂಜಿನಿಯರಿಂಗ್ ಅಥವಾ ನಿರ್ಮಾಣ ಕ್ಷೇತ್ರದಲ್ಲಿದ್ದರೆ ಕೆಂಪು ಬಟ್ಟೆಯನ್ನು ಧರಿಸಿ ಬೆಳಿಗ್ಗೆ ಹನುಮಾನ್ ಚಾಲೀಸನ್ನು 3 ಬಾರಿ ಓದಿ. ಇದನ್ನು ನಿರಂತರ 27 ದಿನಗಳ ಕಾಲ ಮಾಡಿ.

ಸರ್ಕಾರಿ ಕೆಲಸದಲ್ಲಿರುವವರು ಪ್ರಮೋಷನ್ ಗಾಗಿ ಸೂರ್ಯನಿಗೆ ಅರಿಶಿನ ಮಿಶ್ರಿತ ನೀರನ್ನು ಅರ್ಪಿಸಬೇಕು. ‘ಓಂ ಸೂರ್ಯಾಯ ನಮಃ’ ಮಂತ್ರವನ್ನು ಜಪಿಸಿ. ಒಂದು ತಿಂಗಳವರೆಗೆ ಇದನ್ನು ಮಾಡಿದ್ರೆ ಶೀಘ್ರ ಫಲ ಪ್ರಾಪ್ತಿಯಾಗುತ್ತದೆ.

ಮೀಡಿಯಾ, ಸಿನಿಮಾ ಸೇರಿದಂತೆ ಗ್ಲಾಮರ್ ಜಗತ್ತಿನಲ್ಲಿದ್ದರೆ ಪ್ರಮೋಷನ್ ಗಾಗಿ ‘ಓಂ ನಮಃ ಶಿವಾಯ’ ಮಂತ್ರ ಪಠಿಸಿ. ಸ್ಪಟಿಕದ ಮಾಲೆಯನ್ನು ಧರಿಸಿ. ತೀಕ್ಷ್ಣ ಆಹಾರ ಸೇವನೆಯನ್ನು ಕಡಿಮೆ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read