ವಿಶ್ರಾಂತಿ ಪಡೆಯುವ ಬೆಡ್‌ ಮೇಲಿರಲಿ ಸೂಕ್ತ ಬೆಡ್ ಸ್ಪ್ರೆಡ್

ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದು ಉಸ್ಸೆಂದು ಮಲಗಲು ಅಂದವಾದ ಬೆಡ್ ಹಾಗೂ ಮೇಲುಹೊದಿಕೆ ಇರಲೆಂದು ನಾವು ಬಯಸುತ್ತೇವೆ. ಆದರೆ ಮನೆ ಕೋಣೆಗೆ ಹೊಂದಿಕೆಯಾಗುವ ಮೇಲು ಹೊದಿಕೆ ತೆಗೆದುಕೊಳ್ಳುವಲ್ಲಿ ಎಡವುತ್ತೇವೆ.

ಸೂಕ್ತ ಮನೆಗೆ ಸೂಕ್ತ ಬೆಡ್ ಸ್ಪ್ರೆಡ್ ತೆಗೆದುಕೊಳ್ಳಲು ಇಲ್ಲೊಂದಿಷ್ಟು ಟಿಪ್ಸ್ ಇದೆ.

ನೀವು ಬೆಡ್ ಸ್ಪ್ರೆಡ್ ತೆಗೆದುಕೊಳ್ಳುವ ಮುನ್ನ ನಿಮ್ಮ ಕೊಠಡಿಯ ಬಣ್ಣಕ್ಕೆ, ಬೆಡ್ ಟೈಪ್ ಗೆ ಹೊಂದಿಕೆಯಾಗುವುದೇ ಇಲ್ಲವೇ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ.

ಇದು ನಯವಾಗಿ ಆಕರ್ಷಕ ಬಣ್ಣದ ಹೂಗಳಿಂದ ತುಂಬಿದ್ದರೆ ಒಳ್ಳೆಯದು. ಸಣ್ಣ ಹೂಗಳ ಅಥವಾ ಪ್ಲೇನ್ ಬೆಡ್ ಸ್ಪ್ರೆಡ್ ಗಳು ಕೊಠಡಿಯ ಗಾಂಭೀರ್ಯತೆಯನ್ನು ಹೆಚ್ಚಿಸುತ್ತವೆ.

ಮಕ್ಕಳಿದ್ದರೆ ಡೊರೆಮಾನ್, ಚೋಟಾಭೀಮ್ ಚಿತ್ರಗಳಿರುವ ಬೆಡ್ ಸ್ಪ್ರೆಡ್ ಬಳಸುವುದು ಉತ್ತಮ. ಇದು ಮಕ್ಕಳನ್ನೂ ಆಕರ್ಷಿಸುತ್ತದೆ ಹಾಗು ಅವರನ್ನು ಸುಲಭದಲ್ಲಿ ಮಲಗಲು ಪ್ರೇರೇಪಿಸುತ್ತದೆ.

ಈ ಮೇಲು ಹೊದಿಕೆಗೆ ಹೊಂದಿಕೆಯಾಗುವ ಬಣ್ಣದ, ಆಥವಾ ಬೆಡ್ ಸ್ಪ್ರೆಡ್ ಅನ್ನೇ ಮುಂದುವರಿಸಿದ ಬಣ್ಣದ ಪಿಲ್ಲೋ ಕವರ್ ಬಳಸಿ. ಇದು ಬೆಡ್ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಮಲಗುವ ಕೊಠಡಿಯಲ್ಲಿ ಬಳಸುವ ಬೆಡ್ ಸ್ಪ್ರೆಡ್ಗೆ ಡಾರ್ಕ್ ಬಣ್ಣವನ್ನು ಆಯ್ದುಕೊಳ್ಳಬೇಡಿ. ಇದು ನಿಮಗೆ ನಿದ್ರೆಯನ್ನು ತಂದು ಕೊಡಬೇಕೇ ಹೊರತು, ದೂರ ಮಾಡಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read