ವಿಷಕಾರಿ ಹಾವಿನಿಂದ ತಯಾರಾಗುತ್ತೆ ಈ ವೈನ್‌, ಕುಡಿದ ನಂತರ ಪರಿಣಾಮ ಹೇಗಿರುತ್ತೆ ಗೊತ್ತಾ ?

Care to sip? Get to know everything about traditional asian snake wine |  IndiaTV News | Lifestyle News – India TV

ಮದ್ಯಪ್ರಿಯರು ವೆರೈಟಿಗಳನ್ನು ಟ್ರೈ ಮಾಡಿರ್ತಾರೆ. ಆದರೆ ಇಂಥಾ ವಿಚಿತ್ರ ಮದ್ಯವನ್ನು ಕುಡಿದಿರಲಿಕ್ಕಿಲ್ಲ. ಇದು ವಿಷಕಾರಿ ಹಾವುಗಳಿಂದ ತಯಾರಿಸಲಾಗುವ ಅಲ್ಕೋಹಾಲ್‌. ಈ ಹಾವುಗಳು ಎಷ್ಟು ವಿಷಕಾರಿ ಎಂದರೆ ಯಾರಿಗಾದರೂ ಒಮ್ಮೆ ಕಚ್ಚಿದರೆ ನಿಮಿಷಗಳಲ್ಲಿ ಸಾಯುತ್ತಾರೆ. ಆದರೆ ಕೆಲವರು ಈ ಹಾವುಗಳನ್ನು ವೈನ್‌ನಲ್ಲಿ ಹಾಕಿ ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯೆಂದು ಅವರು ಪರಿಗಣಿಸುತ್ತಾರೆ.

ಹಾವಿನ ವೈನ್‌ ಕುಡಿದ ನಂತರ ಏನಾಗುತ್ತದೆ ?

ವಿಷಕಾರಿ ಹಾವುಗಳಿಂದ ಮದ್ಯವನ್ನು ಚೀನಾದಲ್ಲಿ ಮೊದಲು ತಯಾರಿಸಲಾಯ್ತು. ಆದರೆ ಪ್ರಸ್ತುತ ಇದನ್ನು ಹೆಚ್ಚಾಗಿ ಆಗ್ನೇಯ ಏಷ್ಯಾದ ವಿಯೆಟ್ನಾಂನಲ್ಲಿ ತಯಾರಿಸಲಾಗುತ್ತದೆ. ಅಲ್ಲಿನ ಸ್ಥಳೀಯರು ಈ ಮದ್ಯವನ್ನು ಬಹಳ ಉತ್ಸಾಹದಿಂದ ಕುಡಿಯುತ್ತಾರೆ. ಪ್ರವಾಸಿಗರು ಕೂಡ ಇದನ್ನು ಟ್ರೈ ಮಾಡ್ತಾರೆ. ಇದನ್ನು ಕುಡಿಯುವುದರಿಂದ ಮಾನವನ ದೇಹದ ಮೇಲೆ ಯಾವುದೇ ವಿಶೇಷ ಪರಿಣಾಮವಾಗುವುದಿಲ್ಲವಂತೆ.

ಏಕೆಂದರೆ ಹಾವಿನ ವಿಷದ ನಿಜವಾದ ಪರಿಣಾಮವು ದೀರ್ಘಕಾಲದವರೆಗೆ ಆಲ್ಕೋಹಾಲ್‌ನಲ್ಲಿ ಇರುವುದರಿಂದ ಅದು ನಾಶವಾಗುತ್ತದೆ. ಈ ಸ್ನೇಕ್ ವೈನ್ ತಯಾರಿಸಲು ಹೆಚ್ಚಾಗಿ ಅಕ್ಕಿ ವೈನ್ ಅನ್ನು ಬಳಸಲಾಗುತ್ತದೆ. ಅದರಲ್ಲಿ ಸಾಕಷ್ಟು ಗಿಡಮೂಲಿಕೆಗಳನ್ನು ಹಾಕಿದ ನಂತರ ವಿಷಕಾರಿ ಹಾವನ್ನು ಹಾಕಲಾಗುತ್ತದೆ, ಅದನ್ನು ದೀರ್ಘಕಾಲದವರೆಗೆ ಹಾಗೇ ಇಡಲಾಗುತ್ತದೆ. ಕೆಲವು ತಿಂಗಳ ನಂತರ ಅದು ಫರ್ಮೆಂಟ್‌ ಆದಮೇಲೆ ಕುಡಿಯುತ್ತಾರೆ.

ಈ ಹಾವಿನ ವೈನ್ ಮೊದಲು ಚೀನಾದ ಪಶ್ಚಿಮ ಭಾಗದಲ್ಲಿರುವ ಝೌ ಪ್ರಾಂತ್ಯದಲ್ಲಿ ಹುಟ್ಟಿಕೊಂಡಿದೆ. ಸುಮಾರು ಕ್ರಿ.ಪೂ.771ರಲ್ಲಿ ಇದನ್ನು ತಯಾರಿಸಲಾಯಿತಂತೆ. ಅದನ್ನು ಔಷಧದಂತೆ ಬಳಸಲಾಗುತ್ತಿತ್ತು. ಅನಾರೋಗ್ಯದಿಂದ ಬಳಲುತ್ತಿರುವವರನ್ನು ಗುಣಪಡಿಸಲು ಇದನ್ನು ಕುಡಿಸಲಾಗುತ್ತಿತ್ತು. ಆ ಸಮಯದಲ್ಲಿ ಹಾವಿನ ರಕ್ತದ ವೈನ್ ಅನ್ನು ತಯಾರಿಸಲಾಗುತ್ತಿತ್ತು. ಒಂದು ಕಪ್‌ನಲ್ಲಿ ಆಲ್ಕೋಹಾಲ್ ತೆಗೆದುಕೊಂಡು ಜೀವಂತ ವಿಷಕಾರಿ ಹಾವಿನ ಹೊಟ್ಟೆಯನ್ನು ಸೀಳಿ, ಅದರ ರಕ್ತದ ಕೆಲವು ಹನಿಗಳನ್ನು ಮದ್ಯದಲ್ಲಿ ಬೆರೆಸಲಾಗುತ್ತಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read